Advertisement

ಮೃತ ಪ್ರಿನ್ಸ್‌ ಅರ್ಧ ಮುಖ ಪತ್ತೆ

12:14 PM Apr 17, 2017 | Karthik A |

ಗುಂಡ್ಲುಪೇಟೆ: ಬಂಡೀಪುರದ ಹುಲಿ ಪ್ರಿನ್ಸ್‌ ಮೃತಪಟ್ಟಿರುವ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಬೆನ್ನಲ್ಲೇ ಪ್ರಿನ್ಸ್‌ ಮೃತಪಟ್ಟ ಸ್ಥಳದ ಅನತಿ ದೂರಲ್ಲೇ ಅದರ ಮುಖದ ಅರ್ಧ ಭಾಗ ಪತ್ತೆಯಾಗಿರುವುದು ಅನುಮಾನಕ್ಕೆ ಪುಷ್ಟಿ ನೀಡಿದೆ. ಹುಲಿಯ ಮುಖವನ್ನು ಕೊಚ್ಚಿರುವ ಕಿಡಿಗೇಡಿಗಳು ಹುಲಿ ಶವ ದೊರೆತ ಸ್ಥಳದಿಂದ 200 ಮೀ. ದೂರದಲ್ಲಿ ಮುಖದ ಅರ್ಧ ಭಾಗವನ್ನು ಎಸೆದು ಪರಾರಿಯಾಗಿದ್ದಾರೆ. ಪ್ರಾರಂಭದಲ್ಲಿ ಮೃತಪಟ್ಟಿರುವುದು ಪ್ರಿನ್ಸ್‌ ಎನ್ನುವ ಬಗ್ಗೆ ಗೊಂದಲ ಎದುರಾಗಿದ್ದವು. ಅನಂತರ ಮಾಹಿತಿ ಕಲೆಹಾಕಿದಾಗ ಅರಣ್ಯಾಧಿಕಾರಿಗಳು ಅದು ಪ್ರಿನ್ಸ್‌ ಶವ ಎಂಬುದನ್ನು ದೃಢಪಡಿಸಿದ್ದರು. ಹುಲಿ ಮುಖವನ್ನು ಮಚ್ಚಿನಿಂದ ಕೊಚ್ಚಿ ಹಲ್ಲು, ಉಗುರುಗಳನ್ನು ಕಿಡಿಗೇಡಿಗಳು ಕದ್ದಿರುವುದಾಗಿ ಅನುಮಾನ ವ್ಯಕ್ತವಾಗಿದೆ. ವನ್ಯ ಜೀವಿ ಕಾಯ್ದೆ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next