ನವದೆಹಲಿ: ದೆಹಲಿಯ ಮೃಗಾಲಯದಲ್ಲಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಬಂಗಾಳದ ಹುಲಿಯೊಂದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ (ಮೇ 16ರಂದು )ತಿಳಿಸಿದ್ದಾರೆ.
ಸಿದ್ಧಿ ಎಂಬ ಹೆಣ್ಣು ಹುಲಿ ಮೇ 4 ರಂದು ಐದು ಮರಿಗಳಿಗೆ ಜನ್ಮ ನೀಡಿತು.ಅದರಲ್ಲಿ ಬದುಕುಳಿದದ್ದು ಎರಡು ಮರಿಗಳು ಮಾತ್ರ , ಉಳಿದ ಮೂರು ಮರಿಗಳು ಸಾವನಪ್ಪಿದವು. ತಾಯಿ ಮತ್ತು ಎರಡು ಮರಿಗಳು ಆರೋಗ್ಯದಲ್ಲಿವೆ ಎಂದು ಮೃಗಾಲಯದ ಆಡಳಿತ ಮಂಡಳಿಯು ತಿಳಿಸಿದೆ.
ನಿರಂತರ ಸಿಸಿಟಿವಿ ಪರಿಶೀಲನೆ ಮೂಲಕ ನಿಗಾ ವಹಿಸಲಾಗಿದೆ.
ದೆಹಲಿ ಮೃಗಾಲಯದಲ್ಲಿ ಕರಣ್, ಸಿದ್ಧಿ, ಅದಿತಿ ಹಾಗೂ ಬರ್ಖಾ ಎಂಬ ನಾಲ್ಕು ಹುಲಿಗಳಿವೆ.
ನವೆಂಬರ್ 1, 1959 ರಂದು ಸ್ಥಾಪಿಸಲ್ಪಟ್ಟ ಈ ಮೃಗಾಲಯ, ಪ್ರಾರಂಭವಾದಾಗಿನಿಂದ ಮೃಗಾಲಯವು ಸಂರಕ್ಷಣೆ, ಶಿಕ್ಷಣ ಮತ್ತು ಸಾರ್ವಜನಿಕ ಪ್ರದರ್ಶನಕ್ಕಾಗಿ ಹುಲಿಗಳ ಸಂಖ್ಯೆಯನ್ನು ನಿರ್ವಹಿಸುತ್ತದೆ. ವರ್ಷಗಳಲ್ಲಿ, ಹುಲಿಗಳು ಮೃಗಾಲಯದಲ್ಲಿ ಯಶಸ್ವಿಯಾಗಿ ತರಬೇತಿ ಪಡೆದಿವೆ ಮತ್ತು ಭಾರತ ಮತ್ತು ವಿದೇಶಗಳಲ್ಲಿ ಪ್ರಾಣಿ ಸಂಗ್ರಹಾಲಯಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ.