Advertisement
ಸ್ಯಾಂಡಲ್‌ವುಡ್ ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್‌ಗೆ ನೋಟಿಸ್ ಕೊಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಅರಣ್ಯ ಇಲಾಖೆಯ ಪ್ರತ್ಯೇಕ ನಾಲ್ಕು ತಂಡಗಳು ಬುಧವಾರ ಈ ನಾಲ್ವರ ಮನೆಗೆ ಭೇಟಿ ಕೊಟ್ಟಿದ್ದು, ಕೆಲವರ ಮನೆಗಳಲ್ಲಿ ಪರಿಶೀಲನೆ ನಡೆಸಿವೆ. ಈ ವೇಳೆ ರಾಕ್‌ಲೈನ್ ವೆಂಕಟೇಶ್ ಹೊರತುಪಡಿಸಿ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಫೋಟೋದಲ್ಲಿ ಧರಿಸಿರುವ ಹುಲಿ ಉಗುರಿನಂತಿರುವ ವಸ್ತುವನ್ನು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹೆಚ್ಚಿನವು ಮೇಲ್ನೋಟಕ್ಕೆ ಕೃತಕ ಹುಲಿ ಉಗುರಿನಂತಿವೆ ಎನ್ನಲಾಗಿದೆ.
Related Articles
Advertisement
ಮತ್ತೊಂದು ತಂಡ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ರಾಕ್‌ಲೈನ್ ವೆಂಕಟೇಶ್ ಮನೆಯಲ್ಲಿ ಹುಡುಕಾಡಿದೆ. ಆ ವೇಳೆ ವೆಂಕಟೇಶ್ ಇರದಿದ್ದ ಕಾರಣ ಅವರ ಪುತ್ರನಿಂದ ಸಹಿ ಪಡೆದು ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಲ್ಲೇಶ್ವರದಲ್ಲಿರುವ ಜಗ್ಗೇಶ್ ಮನೆಗೆ ತೆರಳಿದ ಕೂಡಲೇ ಅವರ ಪತ್ನಿ ಪರಿಮಳಾ ಜಗ್ಗೇಶ್ ಹುಲಿ ಉಗುರು ಹೋಲುವ ಲಾಕೆಟ್ ಅನ್ನು ಕೊಟ್ಟಿದ್ದಾರೆ. ಹೀಗಾಗಿ ತಪಾಸಣೆ ನಡೆಸುವ ಅಗತ್ಯ ಬರಲಿಲ್ಲ. ಜೆ.ಪಿ.ನಗರದಲ್ಲಿರುವ ನಿಖಿಲ್ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ಕೊಟ್ಟಾಗ ಅವರ ತಂದೆ ಎಚ್.ಡಿ.ಕುಮಾರಸ್ವಾಮಿ ಅವರು ಲಾಕೆಟ್ ಅನ್ನು ಅರಣ್ಯ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಮುಂದಿನ ನಡೆ ಏನು ?ನೋಟಿಸ್ ಪಡೆದವರು ತಮ್ಮಲ್ಲಿ ರುವ ಹುಲಿ ಉಗುರು ನೈಜವಲ್ಲ ಎಂಬುದಕ್ಕೆ ಪೂರಕ ದಾಖಲೆ ನೀಡಿದರೆ ಪ್ರಕರಣದಿಂದ ಪಾರಾಗಬಹುದು. ನೈಜ ಹುಲಿ ಉಗುರು ಎಂಬುದು ಸಾಬೀತಾದರೆ ಕಾನೂನು ಕುಣಿಕೆ ಖಚಿತ. 3ರಿಂದ 7 ವರ್ಷ ಜೈಲು
ವನ್ಯ ಜೀವಿಗಳ ಉಗುರು, ಕೊಂಬು, ಚರ್ಮ, ಕೋಡು, ತುಪ್ಪಳ, ಮೂಳೆ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವುದು ಕಾನೂನು ಬಾಹಿರವಾಗಿದೆ. ನಿಯಮ ಉಲ್ಲಂ ಸಿ ಇಂತಹ ವಸ್ತು ಸಂಗ್ರಹಿಸಿ ದರೆ ತತ್‌ಕ್ಷಣ ಅರಣ್ಯ ಇಲಾಖೆಗೆ ಒಪ್ಪಿಸಬೇಕು. ಕೆಲವು ಸಂದರ್ಭ ಗಳಲ್ಲಿ ಇಲಾಖೆಯಿಂದ ಇದಕ್ಕೆ ಪ್ರಮಾಣ ಪತ್ರ ಪಡೆದಿರ ಬೇಕಾಗುತ್ತದೆ. ಅಕ್ರಮ ವಾಗಿ ವನ್ಯಜೀವಿ ಆವಯವ ಸಂಗ್ರಹಿಸಿಟ್ಟಿರು ವುದು ಸಾಬೀ ತಾದರೆ ಅಂತಹ ವ್ಯಕ್ತಿಗಳಿಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅಡಿಯಲ್ಲಿ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಕನಿಷ್ಠ 10 ಸಾವಿರ ರೂ.ನಿಂದ 25 ಸಾವಿರ ರೂ. ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಈಗ ಆರೋಪ ಎದುರಿಸುತ್ತಿರುವ ಸೆಲೆಬ್ರೆಟಿಗಳು ನಿಯಮ ಉಲ್ಲಂಘಿಸಿರುವುದು ನ್ಯಾಯಾ ಲಯದಲ್ಲಿ ದೃಢಪಟ್ಟರೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿವೆ. ಈ ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ವನ್ಯ ಜೀವಿಯ ಯಾವುದೇ ಅಂಗಾಂಗದ ಉತ್ಪನ್ನ ಗಳನ್ನು ಅಕ್ರಮವಾಗಿ ಹೊಂದುವುದು ಅಪರಾಧವಾಗುತ್ತದೆ. ಈ ಬಗ್ಗೆ ದೂರು ಬಂದರೆ ಇಲಾಖೆ ಪರಿಶೀಲಿಸಿ ಕ್ರಮ ಜರಗಿಸುತ್ತದೆ.
– ಈಶ್ವರ ಖಂಡ್ರೆ,
ಸಚಿವ, ಅರಣ್ಯ, ವನ್ಯಜೀವಿ ಮತ್ತು ಪರಿಸರ.