ಶಿವಮೊಗ್ಗ: ಹುಲಿ ಉಗುರು ವಿಚಾರದಲ್ಲಿ ಎಲ್ಲರೂ ಸಹ ಎಚ್ಚರಿಕೆಯಿಂದ ಇರಬೇಕು. ಸಾರ್ವಜನಿಕ ಜೀವನದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಕಾನೂನು ಎಲ್ಲರಿಗೂ ಒಂದೇ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಮಾಜಿ ಸಿಎಂ ಬಂಗಾರಪ್ಪ ಜನ್ಮ ದಿನಾಚರಣೆ ನಡೆಸಿ ಮಾತನಾಡಿದ ಅವರು, ತಂದೆ ಸಿಎಂ ಆಗಿದ್ದಾಗ ಶಾಲೆಗೆ ಬರುವ ಮಕ್ಕಳಿಗೆ ಒಂದು ರೂ. ಕೊಡುವ ಯೋಜನೆ ಮಾಡಿದ್ದರು. ಇವತ್ತು ನಾನು ಕೂಡ ಶಿಕ್ಷಣ ಸಚಿವನಾಗಿದ್ದೇನೆ. ಇಲಾಖೆಯಲ್ಲಿ ಬದಲಾವಣೆಯ ಕೆಲಸ ಆರಂಭಿಸಿದ್ದೇನೆ. ಇದೇ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲಿ ತಂದೆಯ ಬರ್ತ್ ಡೇ ಮಾಡಿದ್ದೇವೆ. ಮಕ್ಕಳ ಜೊತೆಗೆ ಊಟ ಮಾಡಿ, ಕಾಲ ಕಳೆದಿದ್ದೇವೆ ಎಂದರು.
ಇಂಡಿಯಾ- ಭಾರತ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಎಲ್ಲಾವನ್ನೂ ತನ್ನ ಕೈಯಲ್ಲಿ ಹಿಡಿದುಕೊಳ್ಳಲು ಈ ರೀತಿ ಲಗಾಮು ಹಾಕಲು ಯತ್ನಿಸುತ್ತಿದೆ. ಇದು ಸರಿಯಲ್ಲ. ಆಯಾ ರಾಜ್ಯಕ್ಕೆ ತಕ್ಕಂತಿರುವ ಸಂಪ್ರದಾಯವನ್ನು ಹಾಗೆ ಇರುವಂತೆ ಬಿಡಬೇಕು. ಭಾರತ, ಇಂಡಿಯಾ ಎಂದು ಸುಮ್ಮನೆ ಗೊಂದಲವನ್ನುಂಟು ಮಾಡುವುದು ಸರಿಯಲ್ಲ. ಮಕ್ಕಳನ್ನು ಶುದ್ದವಾಗಿ ಬೆಳೆಸಲು ಅವಕಾಶ ನೀಡಬೇಕು ಎಂದರು.
ಇದನ್ನೂ ಓದಿ:ʼSuriya43ʼ ಸಿನಿಮಾ ತಂಡದಿಂದ ಬಿಗ್ ಅಪ್ಡೇಟ್; ಒಂದೇ ಚಿತ್ರದಲ್ಲಿ ಈ ಮೂವರು ಸ್ಟಾರ್‌ಗಳು
ಡಿಸಿಎಂ ಕಚೇರಿ ನವೀಕರಣ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದಾರೆ. ಈ ಮುಂಚೆ ಅವರು ನಮ್ಮಂತೆಯೇ ಆಡಳಿತ ನಡೆಸಿದ್ದರು ಎಂಬುದನ್ನು ಮರೆಯಬಾರದು. ವಿರೋಧ ಪಕ್ಷದಲ್ಲಿರುವವರು ಕಾವೇರಿ, ಜಿಎಸ್ಟಿ, ಶರಾವತಿ ಸೇರಿದಂತೆ ಯಾವುದರ ಬಗ್ಗೆಯು ಕೇಂದ್ರದೊಂದಿಗೆ ಮಾತನಾಡಲ್ಲ. ಕೇಂದ್ರವು ಶಿಕ್ಷಣ ವಿಚಾರದಲ್ಲಿ ನಮ್ಮ ರಾಜ್ಯದ ಮಕ್ಕಳಿಗೆ 2.800 ರೂ ನೀಡುತ್ತಿದ್ದಾರೆ. ಗುಜರಾತ್ ಸೇರಿದಂತೆ ಇತರೆ ರಾಜ್ಯಗಳ ಮಕ್ಕಳಿಗೆ 5.200 ರೂ. ನೀಡ್ತಿದ್ದಾರೆ. ಈ ಬಗ್ಗೆ ಒಮ್ಮೆಯೂ ಅವರು ಮಾತನಾಡಿಲ್ಲ ಎಂದರು.