Advertisement

Tiger census 2022 ವಿಶ್ವದ ಅತ್ಯಂತ ದೊಡ್ಡ ವನ್ಯಜೀವಿ ಸಮೀಕ್ಷೆ: ವರದಿ

03:43 PM Apr 10, 2023 | Team Udayavani |

ನವದೆಹಲಿ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 2022 ರಲ್ಲಿ ನಡೆಸಿದ ಅಖಿಲ ಭಾರತ ಹುಲಿ ಸಮೀಕ್ಷೆ ಅಂದಾಜು 20 ರಾಜ್ಯಗಳನ್ನು ಒಳಗೊಂಡ, 6,41,449 ಕಿಲೋಮೀಟರ್‌ಗಳ ಪ್ರಭಾವಶಾಲಿ ನಡಿಗೆಯ ಸಮೀಕ್ಷೆಯನ್ನು ಒಳಗೊಳ್ಳುವ ಅತ್ಯಂತ ದೊಡ್ಡ ವನ್ಯಜೀವಿ ಸಮೀಕ್ಷೆಯಾಗಿದೆ.

Advertisement

ಅಧ್ಯಯನ ತಂಡವು NTCA ಮತ್ತು ರಾಜ್ಯಗಳ ಅಧಿಕಾರಿಗಳು, ತಜ್ಞರು, ಸಂಶೋಧನಾ ಜೀವಶಾಸ್ತ್ರಜ್ಞರು, ವಿಜ್ಞಾನಿಗಳು, ಸಂಯೋಜಕರು, ಇಂಟರ್ನಿಗಳು,ಮತ್ತು ಸ್ವಯಂಸೇವಕರನ್ನು ಒಳಗೊಂಡಿತ್ತು. ತಂಡವು 3,24,003 ಆವಾಸಸ್ಥಾನದ ಸ್ಥಳಗಳಲ್ಲಿ ಸಸ್ಯವರ್ಗ, ಮಾನವ ಪರಿಣಾಮಗಳು ಮತ್ತು ಹುಲಿಗಳ ಮಲವನ್ನು ಸಂಗ್ರಹಿಸಿ ಡೇಟಾವನ್ನು ಸಂಗ್ರಹಿಸಲು ಮಾದರಿಗಳನ್ನು ತೆಗೆದುಕೊಂಡಿದೆ.

32,588 ಸ್ಥಳಗಳಲ್ಲಿ ಅಳವಡಿಸಲಾದ ಕೆಮರಾ ಟ್ರ್ಯಾಪ್‌ಗಳ ಮೂಲಕ ಹುಲಿಗಳ 4,70,81,881 ಛಾಯಾಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ “ಹುಲಿಗಳ ಸ್ಥಿತಿ 2022” ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಧ್ಯಯನಕ್ಕೆ ಅಪಾರ ಪ್ರಮಾಣದ ಪ್ರಯತ್ನದ ಅಗತ್ಯವಿದ್ದು, ತಂಡವು ಅದನ್ನು ಪೂರ್ಣಗೊಳಿಸಲು 6,41,102 ಮಾನವ ದಿನಗಳಿಗಿಂತ ಹೆಚ್ಚು ಶ್ರಮ ಹಾಕಿದೆ. ಮೇಲಿನ ಎಲ್ಲಾ ಎಣಿಕೆಗಳ ಮೇಲೆ ಇಲ್ಲಿಯವರೆಗೆ ಯಾವುದೇ ವನ್ಯಜೀವಿ ಸಮೀಕ್ಷೆಯಲ್ಲಿ ಮಾಡಲಾದ ವಿಶ್ವದ ಅತಿದೊಡ್ಡ ಪ್ರಯತ್ನ ಇದಾಗಿದೆ ಎಂದು ವರದಿ ಹೇಳಿದೆ.

2022 ರ ವರದಿ ಪ್ರಕಾರ ಭಾರತದಲ್ಲಿ ಹುಲಿಗಳ ಗಮನಾರ್ಹ ಹೆಚ್ಚಳ ಬಹಿರಂಗವಾಗಿದ್ದು ವರದಿಯ ಪ್ರಕಾರ, ಭಾರತದಲ್ಲಿ ಹುಲಿಗಳ ಕನಿಷ್ಠ ಅಂದಾಜು ಸಂಖ್ಯೆಯು 3,167 ಆಗಿದೆ, ಇದು 2018 ರಲ್ಲಿ 2,697 ಇತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next