ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ದಾಳಿಗೆ ಆನೆ ಮರಿಯೊಂದು ಮೃತಪಟ್ಟಿದೆ. ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ವಲಯದ ದಮ್ಮನಕಟ್ಟೆ ಬಳಿ ಸುಮಾರು 6 ತಿಂಗಳ ಗಂಡು ಆನೆಮರಿಗೆ ಗುರುವಾರ ಮೃತಪಟ್ಟಿದ್ದು, ಹುಲಿ ದಾಳಿ ಯಿಂದ ಆನೆಮರಿಯ ಶವದ ಮೇಲೆ ಗಾಯಗಳಾಗಿದೆ.
ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿಗಳು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ನಾಗರಹೊಳೆ ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಆರ್.ರವಿಶಂಕರ್, ಎಸಿಎಫ್ ಪೂವಯ್ಯ ಹಾಗೂ ಆರ್‌ಎಫ್‌ಒ ವಿನಯ್ ಭೇಟಿ ನೀಡಿದ್ದರು. ಪಶುವೈದ್ಯ ಡಾ. ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು.
ಮುದಗನೂರಿನಲ್ಲಿ ಹುಲಿಗೆ ಹಸು ಬಲಿ
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಮುದಗನೂರಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದಿದೆ.
ಹುಣಸೂರು ತಾಲೂಕಿನ ಹನಗೋಡು ಬಳಿಯ ಮುದಗನೂರು ಗ್ರಾಮದ ನಂಜುಂಡರಿಗೆ ಸೇರಿದ ಹಸುವನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ವೇಳೆ ಪಕ್ಕದ ಹೊಸ ಕೆರೆ ಬಳಿಗೆ ನೀರು ಕುಡಿಯಲು ಹಸು ತೆರಳಿದ್ದಾಗ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಸ್ಥಳಕ್ಕೆ ವೀರನಹೊಸಹಳ್ಳಿ ವಲಯದ ಅರಣ್ಯ
ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.