Advertisement

Tiger attack; ಹೊನ್ನೇಗೌಡನಹಳ್ಳಿ: ಹುಲಿ ದಾಳಿ; ಯುವಕನಿಗೆ ಗಾಯ

07:55 PM Apr 12, 2024 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದ ರೈತರೊಬ್ಬರ ಬಾಳೆ ತೋಟದಲ್ಲಿ ಹುಲಿಯೊಂದು ಶುಕ್ರವಾರ ಮಧ್ಯಾಹ್ನ ಕಾಣಿಸಿಕೊಂಡಿದ್ದು, ಯುವಕನೊಬ್ಬನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ‌.

Advertisement

ಹೊನ್ನೇಗೌಡನಹಳ್ಳಿ ಗ್ರಾಮದ ವೃಷಬೇಂದ್ರಪ್ಪ ಎಂಬ ರೈತ ಬೆಳೆದಿದ್ದ ಬಾಳೆ ಜಮೀನಿನಲ್ಲಿ ಹುಲಿ ಕಾಣಿಸಿಕೊಂಡಿದೆ. ಪಕ್ಕದ ಜಮೀನೊಂದರಲ್ಲಿ ಕೆಲಸ ಮಾಡುತ್ತಿದ್ದ ಮನು(22) ಎಂಬ ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿ ಉಗುರಿನಿಂದ ಕೈ, ಬೆನ್ನು, ತಲೆ ಭಾಗಕ್ಕೆ ಪರಚಿ ಗಾಯಗೊಳಿಸಿದೆ. ಕೂಡಲೇ ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಸ್ಥಳದಲ್ಲೇ ಅರಣ್ಯ ಮತ್ತು ಪೊಲೀಸ್ ಇಲಾಖೆಯವರು ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ನೌಕರರು ಸಿದ್ಧತೆಗಳೊಂದಿಗೆ ಅರವಳಿಕೆ ನೀಡಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ತಂಡವು ಬಾಳೆ ತೋಟ ಪ್ರವೇಶಿಸುತ್ತಿದ್ದಂತೆ ಹುಲಿಯು ಅಲ್ಲಿಂದ ಪಕ್ಕದ ತೋಟಕ್ಕೆ ಓಡಿ ಹೋಗಿದೆ ಎನ್ನಲಾಗುತ್ತಿದೆ. ಹುಲಿ ಕಾಲಿಗೆ ಗಾಯ ಆಗಿರಬಹುದು ಅಥವಾ ಅನಾರೋಗ್ಯ ಇರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಶುಕ್ರವಾರ ಕತ್ತಲೆಯಾದರೂ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್, ಎಸಿಎಫ್‍ಗಳಾದ ನವೀನ್‍ಕುಮಾರ್, ರವೀಂದ್ರ, ಆರ್ ಎಫ್‍ಒ ಗಳು, ಇನ್ಸ್‌ ಪೆಕ್ಟರ್ ಪರಶಿವಮೂರ್ತಿ, ಪಿಎಸ್‍ಐ ಸಾಹೇಬಗೌಡ ಮತ್ತು ನೌಕರರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next