ಮುಂಬಯಿ: ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಅವರ ʼಟೈಗರ್ -3ʼ ಇಂದು (ನ.12 ರಂದು) ವಿಶ್ವದೆಲ್ಲೆಡೆ ರಿಲೀಸ್ ಆಗಿದೆ. ಸಲ್ಮಾನ್ ಖಾನ್ ಅವರ ʼಟೈಗರ್ʼ ಸರಣಿಯ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗಿದೆ.
ಹಬ್ಬದ ಸಂದರ್ಭದಲ್ಲೇ ತನ್ನ ಸಿನಿಮಾವನ್ನು ರಿಲೀಸ್ ಮಾಡಿ, ಕೋಟಿ ಗಳಿಸುವ ಸಲ್ಮಾನ್ ಈ ಬಾರಿ ದೀಪಾವಳಿ ಹಬ್ಬದಂದು ʼಟೈಗರ್ -3ʼ ಸಿನಿಮಾವನ್ನು ರಿಲೀಸ್ ಮಾಡಿದ್ದಾರೆ. “ಸ್ಪೈʼ ಥ್ರಿಲ್ಲರ್ ನಲ್ಲಿ ದೇಶ ಹಾಗೂ ಕುಟುಂಬ ಎರಡರಲ್ಲಿ ಒಂದನ್ನು ಮಾತ್ರ ರಕ್ಷಿಸುವ ಸವಾಲು ಹಾಗೂ ಸಂಕಷ್ಟವನ್ನು ತೋರಿಸಲಾಗಿದೆ.
ʼಟೈಗರ್ʼ ಆಗಿ ಮಿಂಚಿರುವ ಸಲ್ಮಾನ್ ಖಾನ್ ಅವರ ಜಬರ್ ದಸ್ತ್ ಮಾಸ್ ಸೀನ್ ಗಳು ಗಮನ ಸೆಳೆಯುತ್ತದೆ. ಸಿನಿಮಾ ನೋಡಿದ ಬಳಿಕ ಟ್ವಿಟರ್ ನಲ್ಲಿ ಪ್ರೇಕ್ಷಕರು ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ʼಟೈಗರ್ -3ʼ ಬಾಲಿವುಡ್‌ನ “ದಿ ಅವೆಂಜರ್ಸ್”. ಇದು ಅಲ್ಟ್ರಾ ಬ್ಲಾಕ್‌ಬಸ್ಟರ್ ಸಿನಿಮಾವಾಗಿದೆ. ನಿರ್ದೇಶಕ ಮನೀಶ್ ಶರ್ಮಾ ಬಹುಶಃ ಸ್ಪೈ-ವರ್ಸ್‌ನ ಅತ್ಯುತ್ತಮ ಸಿನಿಮಾವನ್ನಾಗಿ ಮಾಡಿದ್ದಾರೆ” ಎಂದು ಒಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
“ಈಗಷ್ಟೇ ʼಟೈಗರ್ -3ʼ ನೋಡಿದೆ. ಇದು ವರ್ಷದ ಅತ್ಯುತ್ತಮ ಚಿತ್ರವಾಗಿದೆ. ಇದು ಪಠಾಣ್‌ಗಿಂತ ಉತ್ತಮವಾಗಿದೆ. ಸಲ್ಮಾನ್ ಖಾನ್ ಬಾಲಿವುಡ್ ಬೆನ್ನೆಲುಬು” ಎಂದು ಒಬ್ಬರು ಹೊಗಳಿದ್ದಾರೆ.
ʼಟೈಗರ್ -3ʼ “ಬ್ಲಾಕ್‌ಬಸ್ಟರ್” ಧಮಾಕಾ ಸಿನಿಮಾ.ಟೈಗರ್ ಈಸ್ ಬ್ಯಾಕ್. ಸಲ್ಮಾನ್ ಖಾನ್ ಅವರ ಅಭಿನಯ ಅದ್ಭುತವಾಗಿದೆ. ಸಲ್ಮಾನ್ ಖಾನ್ ಅದ್ಭುತ ಅಭಿನಯ ಇಮ್ರಾನ್ ಹಶ್ಮಿ ವೃತ್ತಿ ಜೀವನದ ಬೆಸ್ಟ್ ಪರ್ಫೆಮೆನ್ಸ್ ನೀಡಿದ್ದಾರೆ. ತನ್ನ ಅಂದದಿಂದಲೇ ಕತ್ರಿನಾ ಸಿನಿಮಾದಲ್ಲಿ ಗಮನ ಸೆಳೆಯುತ್ತಾರೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.