ಮುಂಬಯಿ: ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಅಭಿನಯದ ಬಾಲಿವುಡ್ ಸಿನಿಮಾ ‘ಟೈಗರ್ -3’ ಥಿಯೇಟರ್ ನಲ್ಲಿ ಪ್ರೇಕ್ಷಕರ ಮನಗೆದ್ದ ಬಳಿಕ ಓಟಿಟಿಯಲ್ಲಿ ತೆರೆಕಂಡಿದೆ.
‘ಟೈಗರ್’ ಸಿನಿಮಾ ಮೂರನೇ ಭಾಗಕ್ಕೆ ಮನೀಶ್ ಶರ್ಮಾ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಳೆದ ವರ್ಷ ನವೆಂಬರ್ ನಲ್ಲಿ ಸಿನಿಮಾ ವರ್ಲ್ಡ್ ವೈಡ್ ತೆರೆ ಕಂಡಿತು. ಸಲ್ಮಾನ್ ಖಾನ್ ಸ್ಪೈ ಥ್ರಿಲ್ಲರ್ ಕಥೆಯಲ್ಲಿ ಮಿಂಚಿದ್ದರು. ಸಲ್ಲು – ಕತ್ರಿನಾ ಕೆಮಿಸ್ಟ್ರಿ ಹಾಗೂ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರನ್ನು ರಂಜಿಸಿದ್ದವು.
ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ 400 ಕೋಟಿಗೂ ಅಧಿಕ ಗಳಿಕೆ ಕಂಡಿತು. ಆ ಮೂಲಕ ಸಲ್ಮಾನ್ ಖಾನ್ ಅವರಿಗೆ ‘ಟೈಗರ್’ ಸರಣಿ ಮತ್ತೊಮ್ಮೆ ಹಿಟ್ ತಂದುಕೊಟ್ಟಿತು. ಸಲ್ಮಾನ್ ಖಾನ್ – ಕತ್ರಿನಾ ಕೈಫ್ ಜತೆ ಇಮ್ರಾನ್ ಹಶ್ಮಿ ಅವರ ನೆಗೆಟಿವ್ ರೋಲ್ ಪ್ರೇಕ್ಷಕರ ಗಮನ ಸೆಳೆದಿತ್ತು.
ಇದೀಗ ಸಿನಿಮಾ ತೆರೆಕಂಡ ವಚನ ಎರಡು ತಿಂಗಳ ಬಳಿಕ ಓಟಿಟಿಯಲ್ಲಿ ಸ್ಟ್ರೀಮ್ ಆಗಿದೆ. ಭಾನುವಾರ (ಜ.7 ರಂದು) ‘ಟೈಗರ್-3’ ಅಮೆಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗಿದೆ. ಇದನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ.
ತನ್ನ ಕುಟುಂಬದ ಉಳಿವಿಗೆ ಹಾಗೂ ದೇಶದ ವಿರುದ್ಧ ರೂಪಿಸಿರುವ ಸಂಚನ್ನು ವಿಫಲಗೊಳಿಸುವ ಸುತ್ತ ಸಾಗುವ ಕಥೆ ‘ಟೈಗರ್ -3’ ಯಲ್ಲಿದೆ.