Advertisement

ತಿಗರಿ ಏತ ನೀರಾವರಿ ಯೋಜನೆಗೆ ಚಾಲನೆ

01:59 PM Sep 30, 2019 | Suhan S |

ಕೊಪ್ಪಳ: ಹಲವು ವರ್ಷಗಳ ಬೇಡಿಕೆಯಾಗಿದ್ದ ತಿಗರಿ ಗ್ರಾಮದ ಏತ ನೀರಾವರಿ ಯೋಜನೆ ಕಾಮಗಾರಿಗೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸುಮಾರು 2 ಕೋಟಿ ರೂ. ವೆಚ್ಚದ ತಿಗರಿ ಏತ ನೀರಾವರಿ ಯೋಜನೆಯಿಂದ ಗರಿಷ್ಠ ಒಂದು ಸಾವಿರ ಎಕರೆ ನೀರಾವರಿಗೆ ಒಳಪಡಲಿದೆ.

Advertisement

ಸುಮಾರು 45 ವರ್ಷಗಳಿಂದ ತಿಗರಿ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಕಡಿಮೆ ಪ್ರಮಾಣದಲ್ಲಿ ನೀರಾವರಿ ಆಗುತ್ತಿದ್ದು, ಈ ಯೋಜನೆಯಿಂದ ನಾಲ್ಕು ಗ್ರಾಮಗಳ ಒಂದು ಸಾವಿರಕ್ಕೂ ಅಧಿ ಕ ಎಕರೆ ಜಮೀನು ನೀರಾವರಿಗೆ ಒಳಪಡಲಿದೆ. ನೀರಾವರಿಗೆ ಮಾತ್ರವಲ್ಲದೇ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಲಿದೆ. ಕೆರೆ ತುಂಬಿಸುವ ಯೋಜನೆಗೆ

ಬಳಕೆಯಾಗಲಿದೆ ಎಂದರು. ಈ ವೇಳೆ ಜಿಪಂ ಉಪಾಧ್ಯಕ್ಷೆ ರತ್ನಮ್ಮ ಭರಮಪ್ಪ, ಕಾಂಗ್ರೆಸ್‌ ಮುಖಂಡರಾದ ಸುರೇಶ ಭೂಮರೆಡ್ಡಿ, ಎಸ್‌.ಬಿ. ನಾಗರಳ್ಳಿ, ಜುಲ್ಲುಸಾಬ್‌ ಖಾದ್ರಿ, ಕಾಂಗ್ರೆಸ್‌ ವಕ್ತಾರ ರವಿ ಕುರಗೋಡ, ತಾಪಂ ಅಧ್ಯಕ್ಷ ಬಾಲಚಂದ್ರನ್‌, ಕೃಷ್ಣ ಇಟ್ಟಂಗಿ, ನಗರಸಭೆ ಸದಸ್ಯ ಅಕºರ್‌ ಪಲ್ಟನ್‌, ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಪ್ರಸನ್ನ ಗಡಾದ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next