Advertisement
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳು, ರಾಮನಗರ ಜಿಲ್ಲೆಯಲ್ಲಿ ನಾಲ್ಕು ತಾಲೂಕುಗಳು ಒಟ್ಟು 8ಕ್ಷೇತ್ರ. ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ರಾಮನಗರ ಕೇಂದ್ರವಾಗಿದ್ದು, ಜೆಡಿಎಸ್, ಕಾಂಗ್ರೆಸ್ ಮುಖಂಡರ ಪ್ರತಿಷ್ಠೆಯ ಕಣವಾಗಿದೆ. ಮತದಾರರ ಸಂಖ್ಯೆ ಎಷ್ಟು? ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆ ಸೇರಿ ಒಟ್ಟು 3898 ಮತದಾರರಿದ್ದಾರೆ.
Related Articles
Advertisement
ದಳದಿಂದ ರಮೇಶ್ ? ಬಿಜೆಪಿಯಿಂದ ರುದ್ರೇಶ್? ಎರಡು ಪಕ್ಷಗಳಿಂದ ಹೊಸಮುಖಗಳು ಚುನಾವಣಾ ಕಣಕ್ಕೆ ಪ್ರವೇಶ ಪಡೆಯುತ್ತಿದ್ದು, ಜೆಡಿಎಸ್‌ನಿಂದ ಹಾಲಿ ವಿಧಾನಪರಿಷತ್ ಸದಸ್ಯ ರಮೇಶ್‌ಗೌಡ ಹೆಸರು ಕೇಳಿಬರುತ್ತಿದೆ. ನಾಮಪತ್ರ ಸಲ್ಲಿಸಲು ರಮೇಶ್‌ಗೌಡ ಬಂದಿದ್ದರು. ಸಮಯ ಮುಗಿದಿದ್ದರಿಂದ ವಾಪಸ್ ತೆರ ಳಿದ್ದಾರೆ. ಬಿಜೆಪಿಯಿಂದ ರಾಮನಗರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ರುದ್ರೇಶ್ ಹೆಸರು ಕೇಳಿಬರುತ್ತಿದೆ.
ಈ ಮದ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂ ದಲೂ ಅಭ್ಯರ್ಥಿ ಪ್ರವೇಶಕ್ಕೆ ಸಾಧ್ಯತೆಯಿದೆ. ಜೆಡಿಎಸ್ ನಲ್ಲಿ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ. ಬೆಂಗ ಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿಗಳಾದ ಎಂಟಿಬಿ ನಾಗರಾಜ್, ಡಾ. ಅಶ್ವತ್ಥ ನಾರಾಯಣ್ ಜೊತೆಗೆ ಕಂದಾಯ ಸಚಿವ ಆರ್.ಅಶೋಕ್ ಸಹ ಅಭ್ಯರ್ಥಿ ಆಯ್ಕೆಗೆ ಕಸರತ್ತು ನಡೆಸಲಿದ್ದಾರೆ.
ಕೇಸರಿ ಕೋಟೆಗಿಲ್ಲ ನೆಲೆ: ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಟ್ಟು 8 ವಿಧಾನಸಭಾ ಕ್ಷೇತ್ರದಲ್ಲಿ ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ಮೂರು ಜೆಡಿಎಸ್ ಶಾಸಕರು, ಒಬ್ಬರು ಕಾಂಗ್ರೆಸ್ ಶಾಸಕರು. ಬೆಂಗಳೂರು ಗ್ರಾಮಾಂ ತರ ಜಿಲ್ಲೆಯ ನಾಲ್ಕು ತಾಲೂಕುಗಳ ಪೈಕಿ ದೊಡ್ಡ ಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕರು, ಹೊಸಕೋಟೆ ಯಲ್ಲಿ ಶಾಸಕ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ.
ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಬಿಜೆಪಿ ಸರ್ಕಾರ ಇರುವುದರಿಂದ ಸಮರ್ಥ ಅಭ್ಯರ್ಥಿ ಯೊಂದಿಗೆ ಸದಸ್ಯರನ್ನು ಸೆಳೆಯುವ ಪ್ರಯತ್ನ ಸಾಧ್ಯತೆ ಗಳು ಇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಆಲಯ ನಡುವೆ ಕಮಲಕ್ಕೆ ಹಿನ್ನೆಡೆಯಾಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಮತ್ತು ನಲ್ಲೂರು ಗ್ರಾಮಪಂಚಾಯಿಗಳ ಅವಧಿ ಮುಗಿದಿರು ವುದರಿಂದ ಗ್ರಾಪಂ ಸದಸ್ಯರಿಗೆ ಮತದಾನದ ಹಕ್ಕು ಇಲ್ಲದಂತಾಗಿದೆ. ಜಿಪಂ ಮತ್ತು ತಾಪಂ ಸದಸ್ಯರ ಅವಧಿ ಮುಗಿದಿರುವುದರಿಂದ ಮತದಾನದ ಹಕ್ಕು ಇಲ್ಲದಂತಾಗಿದೆ. ರಾಮನಗರ ಜಿಲ್ಲೆಯಲ್ಲಿ ಹಾರೋಹಳ್ಳಿ ಗ್ರಾಪಂ ಚುನಾವಣೆ ನಡೆದಿಲ್ಲ. ಬಿಡದಿ ಪುರಸಭೆ ಚುನಾವಣೆ ಆಗಿಲ್ಲ
ಬೆಂ ಗ್ರಾಮಾಂತರ ವಿವರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 23 ಜಿಪಂ ಸದಸ್ಯರು ಇದ್ದು ಹಾಗೂ ನಾಲ್ಕು ತಾಲೂಕು ಗಳಿಂದ ಒಟ್ಟು 58 ತಾಪಂ ಸದಸ್ಯರ ಬಲವಿದೆ. ಜಿಲ್ಲೆಯಲ್ಲಿ 101 ಗ್ರಾಪಂಗಳು ಬರಲಿವೆ. ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ ನಗರ ಸಭೆಗಳು ಹಾಗು ದೇವನಹಳ್ಳಿ ಮತ್ತು ವಿಜಯಪುರ ಪುರಸಭೆಗಳನ್ನು ಹೊಂದಿದೆ.
ಜಿಪಂ ಕ್ಷೇತ್ರ: ತಾಲೂಕುವಾರು ದೇವನಹಳ್ಳಿ ತಾಲೂಕಿನಲ್ಲಿ 5 ಜಿಪಂ ಕ್ಷೇತ್ರಗಳು, ದೊಡ್ಡಬಳ್ಳಾಪುರ-6ಕ್ಷೇತ್ರಗಳು, ಹೊಸಕೋಟೆ-7 ಜಿಪಂ ಕ್ಷೇತ್ರಗಳು, ನೆಲಮಂಗಲ 5ಜಿಪಂ ಕ್ಷೇತ್ರ ಗಳನ್ನು ಹೊಂದಿದೆ. ನಾಲ್ಕು ತಾಲೂಕುಗಳಲ್ಲಿ ತಾಪಂ ಕ್ಷೇತ್ರಗಳು, ದೇವನಹಳ್ಳಿ ತಾಲೂಕು 12 ತಾಪಂ ಕ್ಷೇತ್ರ ಗಳು, ನೆಲಮಂಗಲ ತಾಲೂಕು 12 ತಾಪಂ ಕ್ಷೇತ್ರ ಗಳು, ದೊಡ್ಡಬಳ್ಳಾಪುರ-16 ತಾಪಂ ಕ್ಷೇತ್ರ ಗಳು, ಹೊಸಕೋಟೆ 18 ತಾಪಂ ಕ್ಷೇತ್ರಗಳನ್ನು ಹೊಂದಿವೆ.
ರಾಮನಗರ ವಿವರ
ರಾಮನಗರ ಜಿಲ್ಲೆಯಲ್ಲಿ 126 ಗ್ರಾಪಂಗಳನ್ನು ಹೊಂದಿದೆ. 22 ಜಿಪಂ ಕ್ಷೇತ್ರಗಳಿವೆ. ನಾಲ್ಕು ತಾಲೂಕುಗಳಿಂದ 65 ತಾಪಂ ಕ್ಷೇತ್ರಗಳನ್ನು ಹೊಂದಿದೆ. ರಾಮನಗರ, ಚನ್ನಪಟ್ಟಣ, ಕನಕಪುರ ನಗರ ಸಭೆಗಳು ಹಾಗೂ ಮಾಗಡಿ ಪುರಸಭೆ ಹೊಂದಿದೆ. ನಾಲ್ಕು ತಾಲೂಕುಗಳಲ್ಲಿ ತಾಪಂ ಕ್ಷೇತ್ರ ಗಳ ವಿವರ.
ಮಾಗಡಿ ತಾಲೂಕು15 ತಾಪಂ ಕ್ಷೇತ್ರ ಗಳು, ರಾಮನಗರ ತಾಲೂಕು 12ತಾಪಂ ಕ್ಷೇತ್ರ ಗಳು, ಚನ್ನಪಟ್ಟಣ 15ತಾಪಂ ಕ್ಷೇತ್ರಗಳು, ಕನಕಪುರ 23ತಾಪಂ ಕ್ಷೇತ್ರಗಳನ್ನು ಹೊಂದಿದೆ. ಕಾಂಗ್ರೆಸ್ ಜೆಡಿಎಸ್ ನಡುವ ತೀವ್ಯ ಪೈಪೋಟಿ ಏರ್ಪಟ್ಟಿದೆ. ಶುಕ್ರವಾರ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುವ ಸಾಧ್ಯತೆಗಳಿವೆ. ಅಭ್ಯರ್ಥಿ ಆಯ್ಕೆ ಅಂತಿಮ ಗೊಳ್ಳಬೇಕಾಗಿದೆ. ಇದುವರೆಗೂ ಯಾರೂ ಸಹ ನಾಮಪತ್ರ ಸಲ್ಲಿಸಿರುವುದಿಲ್ಲ.
- – ಎಸ್.ಮಹೇಶ್