Advertisement

ಕಾರ್ಯಕರ್ತರ ಅಭಿಪ್ರಾಯದಂತೆ ಟಿಕೆಟ್‌ ಹಂಚಿಕೆ: ಪ್ರಿಯಾಂಕ್‌

10:54 AM Aug 13, 2018 | Team Udayavani |

ಚಿತ್ತಾಪುರ: ವಾರ್ಡ್‌ಗಳ ಅಭಿವೃದ್ಧಿಗೆ ಪೂರಕವಾಗುವಂತೆ ಅಲ್ಲಿನ ಮತದಾರರು ಸೂಚಿಸುವ ಅಭ್ಯರ್ಥಿಗಳಿಗೆ ಪಕ್ಷದಿಂದ
ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ
ಅವರು, ಕಾಂಗ್ರೆಸ್‌ ಪಕ್ಷ ಜಾತ್ಯತೀತ ತತ್ವದ ತಳಹದಿ ಮೇಲೆ ನಡೆಯುವ ಪಕ್ಷವಾಗಿದೆ. ಪಕ್ಷ ತನ್ನ ತತ್ವ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಪಕ್ಷ ನಿಷ್ಠೆ, ಕಾರ್ಯಕರ್ತರ ಸಂಘಟನೆ, ಜನರೊಂದಿಗಿನ ಸಂಪರ್ಕ, ಅಭಿವೃದ್ಧಿ ಪರ ಚಿಂತನೆಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. 

ಸ್ಥಳೀಯ ಸಂಸ್ಥೆಯಲ್ಲಿ ಆಡಳಿತ ನಡೆಸುವ ಪಕ್ಷ ಹಾಗೂ ಶಾಸಕರ ಮಧ್ಯೆ ಸಮನ್ವಯತೆ ಇದ್ದಾಗ ಮಾತ್ರ ಪಟ್ಟಣ, ಬಡಾವಣೆ ಅಭಿವೃದ್ಧಿಗೆ ಹೆಚ್ಚಿನ ಸಹಕಾರಿಯಾಗುತ್ತದೆ. ಅದಕ್ಕಾಗಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಅಧಿಕಾರ ಪಡೆಯುವುದು ಮುಖ್ಯವಾಗಿದೆ ಎಂದರು.

ಅ. 13 ಹಾಗೂ 14 ರಂದು ಪ್ರತಿ ವಾರ್ಡ್‌ಗಳ ಕಾರ್ಯಕರ್ತರ ಅಭಿಪ್ರಾಯವನ್ನು ಪಕ್ಷದ ಮುಖಂಡರೊಂದಿಗೆ ಪಕ್ಷದ ಕಚೇರಿಯಲ್ಲಿ ಸಂಗ್ರಹಿಸಿದ ನಂತರ ಅಭ್ಯರ್ಥಿಗಳ ಆಯ್ಕೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಮುಖಂಡರಾದ ನಾಗರೆಡ್ಡಿ ಪಾಟೀಲ ಕರದಾಳ, ಡಾ| ಪ್ರಭುರಾಜ ಕಾಂತಾ, ಮುಕ್ತಾರ ಪಟೇಲ, ಎಂ.ಎ ರಶೀದ,
ರಸೂಲ್‌ ಮುಸ್ತಫಾ, ಇಸ್ಮಾಯಿಲ್‌ ಸಾಬ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next