ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಹಗಲುರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ. ಮಾ.12ರಿಂದ 16ರವರೆಗೆ ಭಾರತ-ಶ್ರೀಲಂಕಾ ತಂಡಗಳು ಈ ಪಂದ್ಯದಲ್ಲಿ ಆಡಲಿವೆ. ಶೇ.50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.
ಕರ್ನಾಟಕದ ಮಟ್ಟಿಗೆ ಮುಖ್ಯವಾಗಿರುವ ಈ ಪಂದ್ಯದ ಟಿಕೆಟ್‌ಗಳನ್ನು ಆನ್‌ಲೈನ್ ಹಾಗೂ ನೇರವಾಗಿಯೂ ಖರೀದಿಸಬಹುದು. ಆನ್‌ಲೈನ್ ಖರೀದಿಗೆ ಮಾ.1ರಿಂದ ಅವಕಾಶವಿದೆ. www.ksca.cricket ನಲ್ಲಿ ಖರೀದಿಸಬಹುದು. ಬೆ.10.30ರಿಂದ ಟಿಕೆಟ್ ಖರೀದಿ ನಡೆಸಬಹುದು. ಕೆಎಸ್‌ಸಿಎನಲ್ಲಿ ನೇರವಾಗಿ ಹೋಗಿ ಖರೀದಿಸುವವರಿಗೆ ಮಾ.6ರಿಂದ ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಲಂಕಾ ಸರಣಿಯಿಂದ ಹೊರಬಿದ್ದ ಋತುರಾಜ್ ಗಾಯಕ್ವಾಡ್: ಬದಲಿ ಆಟಗಾರನ ನೇಮಿಸಿದ ಬಿಸಿಸಿಐ
ಬೆಳಗ್ಗೆ 10.30ರ ನಂತರ ಈ ಅವಕಾಶವಿದೆ. ಆನ್‌ಲೈನ್‌ನಲ್ಲಿ ಉಳಿದ ಟಿಕೆಟ್‌ಗಳನ್ನು ಕೆಸ್‌ಎಸ್‌ಸಿಎನಲ್ಲೇ ಮಾ.8ರಿಂದ ಖರೀದಿಸಬಹುದು. ಟಿಕೆಟ್ ಬೆಲೆಗಳು 100 ರೂ.ನಿಂದ ಶುರುವಾಗಿ ಗರಿಷ್ಠ 2,500 ರೂ.ಗಳವರೆಗೂ ಇವೆ. ಪಿ ಕಾರ್ಪೊರೆಟ್, ಪೆವಿಲಿಯನ್ ಟೆರೇಸ್, ಪಿ ಸ್ಟಾಂಡ್‌ಗಳಲ್ಲಿ ವಿಶೇಷ ವೀಕ್ಷಣೆ ವ್ಯವಸ್ಥೆ ಜೊತೆಗೆ, ವಿಶೇಷ ಊಟದ ಕೂಪನ್ ಗಳು ಇರುತ್ತವೆ.
ಮಾ.12ರಿಂದ ನಡೆಯುವ ಪಂದ್ಯವನ್ನು ಗುಲಾಬಿ ಚೆಂಡಿನಲ್ಲಿ ಆಡಲಾಗುತ್ತದೆ. ಮಧ್ಯಾಹ್ನ 2ಕ್ಕೆ ಶುರುವಾಗುವ ಆಟ ರಾತ್ರಿ 9ಕ್ಕೆ ಮುಗಿಯಲಿದೆ