Advertisement
ಕಳೆದ ಚುನಾವಣೆಯಲ್ಲಿ ಇದರಿಂದಾಗಿಯೇ ಕೆಲವು ಕ್ಷೇತ್ರಗಳಲ್ಲಿ ಸೋಲು ಅನುಭವಿಸಿ ಪಾಠ ಕಲಿತಿದ್ದು, ಹೀಗಾಗಿ ಈ ಬಾರಿ ಸಮೀಕ್ಷೆ ಆಧರಿಸಿಯೇ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.
ವಿಪಕ್ಷ ನಾಯಕರು, ಕೆಪಿಸಿಸಿ ಅಧ್ಯಕ್ಷರು, ರಾಜ್ಯ ಉಸ್ತುವಾರಿ, ಪ್ರಮುಖ ನಾಯಕರು- ಹೀಗೆ ವಿವಿಧ ಕೋಟಾಗಳಿಗೂ ಈ ಬಾರಿ ಅಂತ್ಯ ಹಾಡಲು ನಿರ್ಧ ರಿಸಲಾಗಿದೆ. ಯಾರಿಗೂ ಟಿಕೆಟ್ ಕೊಡಿಸುವ ಭರವಸೆ ನೀಡದಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ತಾಕೀತು ಮಾಡಿದೆ ಎಂದು ತಿಳಿದು ಬಂದಿದೆ.
Related Articles
Advertisement
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವೈಯಕ್ತಿಕ ವಾಗಿ, ಕೆಪಿಸಿಸಿ ವತಿಯಿಂದ ಹಾಗೂ ರಾಜ್ಯ ಉಸ್ತುವಾರಿ ಮಾಡಿರುವ ಸಮೀಕ್ಷೆಯ ಜತೆಗೆ ಎಐಸಿಸಿ ಕೂಡ ಅಂತಿಮ ಸಮೀಕ್ಷೆ ನಡೆಸಿದೆ. ಅದು ಕೇಂದ್ರ ಚುನಾವಣ ಸಮಿತಿಯ ಮುಂದೆ ಬರಲಿದೆ. ಅದರ ಆಧಾರದ ಮೇಲೆಯೇ ಟಿಕೆಟ್ ಘೋಷಣೆ ಯಾಗಲಿದೆ ಎಂದು ತಿಳಿದು ಬಂದಿದೆ.
ಸ್ವಂತ ವರ್ಚಸ್ಸಿನ ಅಭ್ಯರ್ಥಿಗಳಿಲ್ಲಕೆಲವು ಕ್ಷೇತ್ರಗಳಲ್ಲಿ ಮತದಾರರ ಒಲವು ಪಕ್ಷದ ಪರ ಇದ್ದರೂ ಸ್ವಂತ ವರ್ಚಸ್ಸಿನಿಂದ ಗೆಲ್ಲಬಲ್ಲ ಅಭ್ಯರ್ಥಿಗಳಿಲ್ಲ ಎಂಬುದು ಮತಗಟ್ಟೆ ವ್ಯಾಪ್ತಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಇದು ಪಕ್ಷದಲ್ಲಿ ಚಿಂತೆಗೆ ಕಾರಣವಾಗಿದ್ದು, ಇಂಥ ಕ್ಷೇತ್ರಗಳಲ್ಲಿ ಸಮರ್ಥರಿಗಾಗಿ ಶೋಧ ನಡೆಸಲಾಗಿದೆ. ಈ ಮಧ್ಯೆ, ಫೆ. 15ರೊಳಗೆ ಮೊದಲ ಅಭ್ಯರ್ಥಿ ಪಟ್ಟಿ ಬಿಡುಗಡೆ ಅನುಮಾನ, ಮಾಸಾಂತ್ಯಕ್ಕೆ ಆಗಬಹುದು. ಹಾಸನ, ಮಂಡ್ಯ ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ಬಿಜೆಪಿ, ಜೆಡಿಎಸ್‌ನಿಂದ ಕೆಲವು ನಾಯಕರು ಬರಲು ಮುಂದಾಗಿದ್ದು, ಹೈಕಮಾಂಡ್ ಅನುಮತಿಗಾಗಿ ಕಾಯಲಾಗುತ್ತಿದೆ ಎನ್ನಲಾಗಿದೆ. ಕೋಟಿ ಕುಟುಂಬಗಳಿಗೆ ಕಾಂಗ್ರೆಸ್ ಭರವಸೆ ಕಾರ್ಡ್
ಬಿಜೆಪಿಯವರು “ಬೂತ್ ವಿಜಯ’ ಅಭಿಯಾನ ನಡೆಸಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಕೋಟಿ ಕುಟುಂಬಗಳಿಗೆ “ಭರವಸೆ ಕಾರ್ಡ್’ ತಲುಪಿಸುವ ಅಭಿಯಾನಕ್ಕೆ ಸಿದ್ಧತೆ ನಡೆಸಲಾಗಿದೆ. 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಿಕ 2 ಸಾವಿರ ರೂ. ಘೋಷಣೆ ಜತೆಗೆ ಇನ್ನೂ ಮೂರು ಘೋಷಣೆ ಗಳುಳ್ಳ ಕಾರ್ಡ್ ಸಿದ್ಧಪಡಿಸಿ, ಅದಕ್ಕೆ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಖಾತರಿಯ ಸಹಿ ಹಾಕಿ ಮಾರ್ಚ್ ತಿಂಗಳಲ್ಲಿ ಒಂದು ಕೋಟಿ ಕುಟುಂಬಗಳಿಗೆ ತಲುಪಿಸಲು ನಿರ್ಧರಿಸಲಾಗಿದೆ. ಜತೆಗೆ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪರ ಇರುವ ಮತ ದಾರರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸುವ ಹೊಣೆಗಾರಿಕೆಯನ್ನು ಬೂತ್ ಸಮಿತಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. -ಎಸ್. ಲಕ್ಷ್ಮೀನಾರಾಯಣ