Advertisement

ಉಡುಪಿ: ರೈಲ್ವೇ ಪ್ಲ್ರಾಟ್‌ಫಾರಂನಲ್ಲಿ ಟಿಕ್‌ ಟಾಕ್‌ ಶೋ: ಇಬ್ಬರ ಬಂಧನ

12:57 PM Apr 18, 2019 | Team Udayavani |

ಉಡುಪಿ: ಉಡುಪಿ ರೈಲು ನಿಲ್ದಾಣದ ಪ್ಲ್ರಾಟ್‌ಫಾರಂ ಮೇಲೆ ರೈಲು ಬರುವ ಸಂದರ್ಭದಲ್ಲಿ ನೃತ್ಯ ಮಾಡುತ್ತಾ ಟಿಕ್‌ ಟಾಕ್‌ ವೀಡಿಯೋ ಮಾಡುತ್ತಿದ್ದ ಇಬ್ಬರನ್ನು ಎ.14 ರಂದು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

ರೈಲು ಚಲಿಸುವ ಸಂದರ್ಭದಲ್ಲಿ ಅಥವಾ ರೈಲ್ವೇ ಟ್ರ್ಯಾಕ್‌ ಮೇಲೆ ವೀಡಿಯೋ ಮಾಡುವುದು ಅಪಾಯಕಾರಿಯಾಗಿದ್ದು, ಹಲವಾರು ಮಂದಿ ರೈಲು ಢಿಕ್ಕಿ ಹೊಡೆದು ಅಥವಾ ರೈಲಿನಿಂದ ಬೀಳುವ ಮೂಲಕ ಸಾವನ್ನಪ್ಪುತ್ತಿದ್ದಾರೆ. ಈ ರೀತಿಯ ಅಪರಾಧಗಳು ರೈಲ್ವೇ ಕಾಯ್ದೆ ಅಡಿಯಲ್ಲಿಶಿಕ್ಷಾರ್ಹ ಅಪರಾಧವಾಗಿದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next