ಮುಂಡಗೋಡ: ಟಿಬೇಟಿಯನ್ನರ ಹೊಸ ವರ್ಷದ ಹಬ್ಬವಾದ ಲೋಸಾರ ಹಬ್ಬದ ಕೊನೆಯ ದಿನವಾದ ಶನಿವಾರ ಧಾರ್ಮಿಕ ವಿಧಿವಿಧಾನಗಳಂತೆ ಭೂತ ದಹನ ಮಾಡುವ ಕಾರ್ಯಕ್ರಮವು ನಡೆಯಿತು.
ಲೋಸರ್ ಹಬ್ಬವನ್ನು ಟಿಬೇಟಿಯನ್ನರ ಅದ್ದೂರಿಯಿಂದ ನಡೆಸುಕೊಂಡು ಬರುವ ಪದ್ಧತಿ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದಾಗಿ ಟಿಬೆಟಿಯನ್ನರು ಹೊಸ ವರ್ಷವಾದ ಲೋಸಾರ ಹಬ್ಬವನ್ನು ಸರಳವಾಗಿ ಮನೆಯಗಳಲ್ಲಿ, ಬೌದ್ಧಮಂದಿರಲ್ಲಿ ಆಚರಿಸಿ ಭೂತ ದಹನ ಮಾಡುತ್ತಿರಲಿಲ್ಲ. ಪ್ರಸ್ತುತ ವರ್ಷದ ಹೊಸ ವರ್ಷವನ್ನು ಲೋಸರ್‌ನ್ನು ವಿಜೃಂಭಣೆಯಿಂದ ಆಚರಿಸಿದರು.
ತಾಲೂಕಿನ ಟಿಬೆಟಿಯನ್ ಕ್ಯಾಂಪ ನಂ.1ರ ಬೌದ್ಧ ಮಂದಿರದಲ್ಲಿ ಲೋಸಾರ ಹಬ್ಬದ ಕೊನೆಯ ದಿನದ ಶನಿವಾರ ಟಿಬೇಟಿಯನ್ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ ಜರುಗಿತು. ನಂತರ ಬೌದ್ಧ ಮಂದಿರದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹಿರಿಯ ಬೌದ್ಧ ಸನ್ಯಾಸಿಗಳ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬೌದ್ಧ ಮಂದಿರದ ಆವರಣದಿಂದ ವಿಶೇಷ ಮೂರ್ತಿಯನ್ನು ತಯಾರು ಮಾಡಿದ ಮೂರ್ತಿಯನ್ನು ಬೌದ್ಧ ಸನ್ಯಾಸಿಗಳು ಸಂಪ್ರದಾಯದ ಉಡುಗೆ ತೊಟ್ಟು ವಿವಿಧ ವಾದ್ಯಗಳನ್ನು ನುಡಿಸಿ ಮೆರವಣಿಗೆ ಮೂಲಕ ಭೂತ ದಹನ ಮಡುವ ಸ್ಥಳಕ್ಕೆ ಬಂದು ಗುಡಿಸಿಲಿನ ಆಕಾರದ ಸ್ಥಳದಲ್ಲಿ ಸುಡುವ ಪೂರ್ವದಲ್ಲಿ ಟಿಬೇಟಿಯನ್ನರು ಹಬ್ಬಕ್ಕೆ ಮಾಡಿರುವ ವಿವಿಧ ಧವಸ ಧಾನ್ಯಗಳಿಂದ ತಯಾರಿಸಿದ ಪದಾರ್ಥವನ್ನು ಹಾಗೂ ಬಿಳಿ ವಸ್ತ್ರವನ್ನು ಹಾಕಿದರು ತದನಂತರ ಮೂರ್ತಿಯನ್ನು ಇಟ್ಟು ಬೌದ್ದ ಸನ್ಯಾಸಿ ಅಗ್ನಿ ಸ್ಪರ್ಶ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕದ ಸಹಸ್ರಾರು ಟಿಬೇಟಿಯನ್ನರ ಮತ್ತು ಬೌದ್ಧ ಸನ್ಯಾಸಿಗಳಿದ್ದರು. ಈ ಬಾರಿ ಕ್ಯಾಂಪ್ ನಂ೨ ನಲ್ಲಿ ಭೂತ ದಹನ ಮಾಡುವ ಕಾರ್ಯಕ್ರಮವನ್ನು ಧಾರ್ಮಿಕ ವಿಧಿವಿಧಾನಗಳಂತೆ ನಡೆಸಿದರು.
ಲೋಸಾರ ಹಬ್ಬದ ಕೊನೆಯ ದಿನದಂದು ನಡೆಯುವ ಭೂತದಹನ ಕಾರ್ಯಕ್ರಮಕ್ಕೆ ಪೊಲೀಸರು ವಿಶೇಷ ನಿಗಾ ವಹಿಸಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಭೂತದಹನದ ಹೆಸರಿನಲ್ಲಿ ಭಾರತೀಯ ನೋಟು, ನಾಣ್ಯಗಳನ್ನು ಸುಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಅಂದಿನಿಂದ ಇಂದಿನವರೆಗೂ ಭೂತದಹನ ಕಾರ್ಯಕ್ರಮದಲ್ಲಿ ಸ್ಥಳೀಯ ಪೊಲೀಸರು ಹಾಗೂ ಟಿಬೆಟಿಯನ್ ಮುಖಂಡರು ಉಪಸ್ಥಿತರಿದ್ದು ಸುಡುವ ಸ್ಥಳದಲ್ಲಿ ಹಾಕುವ ವಸ್ತುಗಳನ್ನು ಪರಿಶೀಲಿಸುವದು ಸಾಮಾನ್ಯವಾಗಿತ್ತು.
ಇದನ್ನೂ ಓದಿ : ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು , ಮೂವರು ಸ್ಥಳದಲ್ಲೇ ಸಾವು
ತೇಂಜಿನ್ ಸಿರಿಂಗ್, ಕ್ಯಾಂಪ್ ನಂ.2 ನಿವಾಸಿ : ವಿಶೇಷ ಪೂಜೆ ಸಲ್ಲಿಸುವ ಮೂಲಕ ವರ್ಷದ ಎಲ್ಲ ಅಶುಭ ಸಂಕೇತಗಳನ್ನು ಸುಟ್ಟು ಹಾಕುವ ಕಾರ್ಯಕ್ರಮ. ಮನುಷ್ಯರಿಗೆ ಅಷ್ಟೇ ಅಲ್ಲದೇ ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತೆ, ಪ್ರಕೃತಿ ವಿಕೋಪಗಳು ಬಾರದಂತೆ ಮತ್ತು ಉತ್ತಮ ರಾಜಕೀಯ ಬೆಳವಣಿಗೆಯ ಸಲುವಾಗಿ ಈ ಸಂದರ್ಭದಲ್ಲಿ ದೇವರಲ್ಲಿ ಬೇಡಿಕೊಳ್ಳಲಾಗುತ್ತದೆ.
ಲಾಕ್ಬಾ ಸೆರಿಂಗ್., ಟಿಬೆಟಿಯನ್ ಆಡಳಿತ ಕಛೇರಿ ಚೇರ್‌ಮನ್: ಕೋವಿಡ್ ಮಹಾಮಾರಿಯಿಂದಾಗಿ 2 ವರ್ಷ ಲೋಸಾರ ಹಬ್ಬವನ್ನು ಸರಳವಾಗಿ ಮನೆಯಗಳಲ್ಲಿ, ಬೌದ್ಧ ಮಂದಿರಲ್ಲಿ ಆಚರಿಸಿದರು. ಎಲ್ಲಾ ಕಾಲೂನಿಯ ಬೌದ್ಧ ಸನ್ಯಾಸಿಗಳು ಮತ್ತು ಟಿಬೇಟಿಯನ್ನರು ಸೇರಿ ಲೋಸರಿನ ಕೊನೆಯ ದಿನದಂದು ಭೂತ ದಹನ ಮಾಡುವ ಕಾರ್ಯಕ್ರಮವು ನಡೆಸುತ್ತಿದ್ದೇವು. ಹೆಚ್ಚು ಜನ ಸೇರುತ್ತಾರೆ ಎಂಬ ಉದ್ದೇಶದಿಂದ ಈ ಬಾರಿ ಎರಡು ಕಡೆ ಭೂತ ದಹನ ಮಾಡುವ ಕಾರ್ಯಕ್ರಮವು ಮಾಡಿದ್ದೇವೆ. ಕ್ಯಾಂಪ್ ನಂ 2 ಮತ್ತು ಕ್ಯಾಂಪ್ ನಂ 1 ರಲ್ಲಿ ಮಡಲಾಯಿತು. ಮುಂದಿನ ವರ್ಷ ಒಂದೇ ಕಡೆ ಸೇರಿ ವಿಜೃಂಭಣೆಯಿಂದ ಆಚರಿಸಲಾಗುವುದು.