Advertisement
ಒಂದು ಕಾಲದಲ್ಲಿ ಬುಡಕಟ್ಟು ಯಾ ಟ್ರೈಬಲ್ ಜನಾಂಗದವರು ತೊಡುತ್ತಿದ್ದ ಒಡವೆಗಳು ಈ ಕಾಲದಲ್ಲಿ ಟ್ರೆಂಡ್ ಆಗಿ ರೂಪುಗೊಂಡಿರುವುದಕ್ಕೆ ಗೆಳತಿಯನ್ನು ನೋಡಿದಾಗ ನನ್ನನ್ನು ಆ ಒಡವೆಗಳು ಸೆಳೆದಿದ್ದವು. ಟ್ರೆಂಡ್ ರೂಪದಲ್ಲಿ ಜನ್ಮ ತಳೆದು, ವಿಶೇಷವಾಗಿ ಲಲನೆಯರ ನೆಚ್ಚಿನ ಒಡವೆ ಎನಿಸಿದ್ದು ಸಂತಸದ ವಿಷಯ.
ಇತ್ತೀಚಿನ ಸಿನೆಮಾ ತಾರೆಯರು ಈ ಟ್ರೈಬಲ್ ಒಡವೆಗಳಿಗೆ ಅಧಿಕ ಪ್ರಾಮುಖ್ಯ ನೀಡುತ್ತಿದ್ದಾರೆ. ಸಂಜೆ ಪಾರ್ಟಿಗಳಿಗೆ ತೆರಳುವಾಗ ಪ್ಲೆ„ನ್ ಬಾರ್ಡರ್ ಸಾರಿ ಜತೆ ಟ್ರೈಬಲ್ ಸಟ್ಲಾರಾ ಹಾರ ಮತ್ತು ಕಾಂಗ್ರ ಕಿವಿಯೋಲೆ ಧರಿಸಿದರೆ ಸಿಂಪಲ್ ಆ್ಯಂಡ್ ಗ್ರ್ಯಾಂಡ್ ಲುಕ್‌ನಲ್ಲಿ ಮಿಂಚಬಹುದು. ಕಾಲೇಜು ಕನ್ಯೆಯರು ಪ್ಲೆ„ನ್ ಟಿ-ಶರ್ಟ್, ಬೊಟ್‌ನೆಕ್ ಟಾಪ್ ಧರಿಸುವವರು ಹೆಚ್ಚಾಗಿ ಟ್ರೈಬಲ್ ನಾಗಮಣಿಸರ, ಕಾಂಗ್ರಾ ಜುಮ್ಕಿ, ಮತ್ತು ಕನಾಲೆ ಜುಮ್ಕಿ ಇಷ್ಟಪಡುತ್ತಾರೆ. ಸಿಂಪಲ್ ಮೇಕಪ್‌ನೊಂದಿಗೆ ಡಾರ್ಕ್ ಪಿಂಕ್, ರೆಡ್ಡಿಶ್ ಕುರ್ತಿ ಟಾಪ್ ಜತೆ ಚೋಕರ್ ಲಾಂಗ್ ನಕ್ಲೇಸ್ ಧರಿಸಿದರೆ ಗ್ಲಾಮರಸ್‌ನಲ್ಲಿ ಕಾಣಬಹುದು. ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಪೆರಿಯನ್ ಪೆಂಡೆಂಟ್ ಲಾಂಗ್ ಚೈನ್ ಅವರಿಗೆ ಸೂಕ್ತ.
Related Articles
ಟ್ರೈಬಲ್ ಒಡವೆಗಳು ಕರ್ನಾಟಕ, ಬಿಹಾರ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಮೇಘಾಲಯ, ಸಿಕ್ಕಿಂ, ಮುಂತಾದ ಪ್ರಾದೇಶಿಕ ವೈವಿಧ್ಯತೆಯನ್ನು ಹೊಂದಿವೆ. ತಾಮ್ರ, ಗಾಜು, ಬೆಳ್ಳಿ, ಬಿದಿರು, ಗರಿ, ನವಿಲುಗರಿ, ಬೀಜಗಳು, ನಾಣ್ಯ, ಮಣಿ ಇತ್ಯಾದಿ ನಿಸರ್ಗಮೂಲಕ್ಕೆ ಮಾಡರ್ನ್ ಟಚ್ ನೀಡಿ ಇಂದು ಮಾರಾಟ ಮಾಡಲಾಗುತ್ತಿದೆ. ಈ ಒಡವೆಯೂ ಹದಿಹರೆಯ ಮತ್ತು ಮಧ್ಯಮ ವಯಸ್ಕರ ಫೇವೆರೆಟ್ ಒಡವೆಗಳು ಎನ್ನಬಹುದು.
Advertisement
- ರಾಧಿಕಾ, ಕುಂದಾಪುರ