Advertisement
ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಇಲ್ಲಿಯ ಸಾರ್ವಜನಿಕರ ಮತ್ತು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
Related Articles
Advertisement
ಹೆಚ್ಚಿನ ಸೌಲಭ್ಯ: ಈ ಶಾಲೆಯಲ್ಲಿ ಈಗ ಎಲ್.ಕೆ.ಜಿ ಯಿಂದ ಹಿಡಿದು 8ನೇ ತರಗತಿ ವರೆಗೆ 550ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ, ಈ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನಡೆಯುತ್ತಿದೆ, ಈ ಶಾಲೆಯಲ್ಲಿ ಖಾಸಗಿ ಶಾಲೆಯಲ್ಲಿಯೂ ಇರದ ರೀತಿಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್, ಆನ್‌ಲೈನ್ ಸ್ಕೂಲ್, ಶುದ್ಧಕುಡಿಯುವ ನೀರಿನ ಸೌಲಭ್ಯ, ಹೈಟೆಕ್ ಶೌಚಾಲಯಗಳು, ವಿಶಾಲವಾದ ಆಟದ ಮೈದಾನಗಳು, ನುರಿತ ಅನುಭವಿ ಶಿಕ್ಷಕರಿಂದಬೋಧನೆ, ಕಂಪ್ಯೂಟರ್ ಶಿಕ್ಷಣ, ಯೋಗ ಶಿಕ್ಷಣ, ಸಂಗೀತ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಸಮಾಜ ವಿಜ್ಞಾನ ಪ್ರಯೋಗಾಲಯ, ಅತ್ಯಾಧುನಿಕ ಗ್ರಂಥಾಲಯ ನೀಡುತ್ತಿರುವುದರ ಜೊತೆಗೆ ಸಿ.ಸಿ. ಟಿವಿ, ಬಯೋ ಮೆಟ್ರಿಕ್ ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಏನೆಲ್ಲಾ ಸೌಲಭ್ಯಗಳು ದೊರೆಯುತ್ತದೆ ಅದಕ್ಕಿಂತಲೂ ಹೆಚ್ಚಿನ ಸೌಲಭ್ಯವನ್ನು ನೀಡಲು ಇಲ್ಲಿಯ ಶಿಕ್ಷಕರು ಮುಂದಾಗಿದ್ದಾರೆ.
ಮಕ್ಕಳಲ್ಲಿ ಹುರುಪು: ಶತಮಾನ ಕಂಡಿರುವ ಈ ಶಾಲೆಯ ಪಾರಂಪರಿಕ ಕಟ್ಟಡವನ್ನು ಹಾಗೇ ಉಳಿಸಿಇಡೀ ಕಟ್ಟಡಕ್ಕೆ ಸುಣ್ಣ, ಬಣ್ಣ ಬಳಿಸಿದ್ದಾರೆ, ಈ ಶಾಲಾ ಕಟ್ಟಡ ಈಗ ಕಂಗೊಳಿಸುತ್ತಿದೆ, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ, ಶೈಕ್ಷಣಿಕ ಪ್ರವಾಸ ಕೈಗೊಂಡು ಮಕ್ಕಳಲ್ಲಿ ಹುರುಪು ತುಂಬಿದ್ದಾರೆ.
ಜಿಲ್ಲೆಯ ಉತ್ತಮ ಶಿಕ್ಷಕ ಸತೀಶ್: ತುರುವೇಕೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಸತೀಶ್ ಕುಮಾರ್ ಅವರ ಕಾರ್ಯ ಸಾಧನೆಯನ್ನು ಮೆಚ್ಚಿ ಸಾರ್ವಜನಿಕ ಶಿಕ್ಷಣ ಇಲಾಖೆ ಇವರನ್ನು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ತುರುವೇಕೆರೆ ಪಟ್ಟಣದಲ್ಲಿರುವ ಸರ್ಕಾರಿ ಶಾಲೆ ಇಡೀ ಜಿಲ್ಲೆಗೆ ನಂಬರ್ ಒನ್ ಮಾದರಿ ಶಾಲೆ. ಆ ಶಾಲೆಯಲ್ಲಿ 70-80 ಮಕ್ಕಳು ಇದ್ದರು ಈಗ 600 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಖಾಸಗಿ ಶಾಲೆಯನ್ನೂ ಈ ಸರ್ಕಾರಿ ಶಾಲೆ ಮೀರಿಸುತ್ತಿದೆ. ಅಲ್ಲಿಯ ಮುಖ್ಯ ಶಿಕ್ಷಕ ಸತೀಶ್ ಮಕ್ಕಳಿಗಾಗಿ ತ್ಯಾಗ ಮಾಡುತ್ತಿದ್ದಾರೆ. ಇವರು ಇತರರಿಗೆ ಮಾದರಿ. – ಷಣ್ಮುಖಪ್ಪ, ಜಿಲ್ಲಾ ಅಧ್ಯಕ್ಷ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ತುರುವೇಕೆರೆ ಸರ್ಕಾರಿ ಶಾಲೆ ಬೌದ್ಧಿಕ ಸೌಲಭ್ಯ, ಪಾರಂಪರಿಕ ಕಟ್ಟಡ ಉಳಿಸಿದ್ದಾರೆ, ಶತ ಮಾನದ ಈ ಶಾಲೆಗೆ ಸುಣ್ಣ ಬಣ್ಣ ಬಳಿಸಿ ರಕ್ಷಿಸಿದ್ದಾರೆ, ತಾಂತ್ರಿಕತೆ ಬಳಸಿ ಮಕ್ಕಳಿಗೆ ನಮ್ಮ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಎಲ್ಲಾ ರೀತಿಯ ಸೌಲಭ್ಯ ಸರ್ಕಾರಿ ಶಾಲೆಯಲ್ಲಿ ಇದ್ದು ಇದು ಜಿಲ್ಲೆಗೇ ಒಂದು ಮಾದರಿ ಶಾಲೆ. – ಸಿ.ರಂಗಧಾಮಪ್ಪ, ಡಿವೈಪಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ
– ಚಿ.ನಿ.ಪುರುಷೋತ್ತಮ್