Advertisement

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

07:58 AM Nov 25, 2021 | Team Udayavani |

ಮೇಷ: ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಉತ್ತಮ ಧನ ಸಂಗ್ರಹ. ಬಂಧುಮಿತ್ರರ ಸಹಾಯ ಸಹಕಾರ ಪ್ರಾಪ್ತಿ. ಮಕ್ಕಳ ನಿಮಿತ್ತ ಪ್ರಯಾಣ ಖರ್ಚು ಸಂಭವ. ಗುರುಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

Advertisement

ವೃಷಭ: ದೀರ್ಘ‌ ಪ್ರಯಾಣ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ ಧನವ್ಯಯ. ಆಸ್ತಿ ವಿಚಾರ ಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಅವಿವಾಹಿತರಿಗೆ ವಿವಾಹ ಭಾಗ್ಯ.

ಮಿಥುನ: ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಹೋದ್ಯೋಗಿಗಳಿಂದಲೂ ಸಹೋದರರಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಲಭಿಸೀತು. ದೂರದ ವ್ಯವಹಾರದಿಂದ ಉತ್ತಮ ಧನಸಂಪತ್ತು ವೃದ್ಧಿ.

ಕರ್ಕ: ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಭಿವೃದ್ಧಿ. ಆಸ್ತಿ ವಿಚಾರಗಳಲ್ಲಿ ನಿರ್ಣಯ ಸಾಧ್ಯ. ಗುರುಹಿರಿಯರ ರಕ್ಷೆಯಿಂದ ಕಾರ್ಯ ಸಫ‌ಲತೆ.

ಸಿಂಹ: ಆರೋಗ್ಯ ಗಮನಿಸಿ. ಹೆಚ್ಚಿದ ಜವಾಬ್ದಾರಿಯಿಂದ ದೇಹಾಯಾಸ ತೋರೀತು. ಜನಪದರೊಂದಿಗೆ ತಾಳ್ಮೆ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಅನ್ಯಥಾ ಚರ್ಚೆಗೆ ಆಸ್ಪದ ನೀಡದಿರಿ. ಧನಾರ್ಜನೆಗೆ ಕೊರತೆ ಕಾಣದು.

Advertisement

ಕನ್ಯಾ: ದೀರ್ಘ‌ ಪ್ರಯಾಣ ಸಂಭವ. ದೇಹಾಯಾಸ ತೋರೀತು. ದೂರದ ವ್ಯವಹಾರಗಳಲ್ಲಿ ಪ್ರಗತಿ. ನಿರೀಕ್ಷಿತ ಧನ ಸಂಪತ್ತು ವೃದ್ಧಿ . ಮಕ್ಕಳಿಂದಲೂ ಗುರುಹಿರಿಯರಿಂದಲೂ ಸಂತೋಷ ವೃದ್ಧಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಬದಲಾವಣೆ.

ತುಲಾ: ಆರೋಗ್ಯ ವೃದ್ಧಿ. ವಸ್ತ್ರ ಆಭರಣಗಳ ಖರೀದಿ. ವಿವಾಹಾದಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ. ಸುಖ ಸಂತೋಷ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.

ವೃಶ್ಚಿಕ: ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ಗಣ್ಯರ ಸಂಪರ್ಕ, ಗೌರವಾದಿ ವೃದ್ಧಿ. ಬಂಧುಜನ ರೊಂದಿಗೆ ವಿಲಾಸ. ಧಾರ್ಮಿಕ ವಿಚಾರ ಆಸಕ್ತಿ. ಜನಮೆಚ್ಚುವ ಕೆಲಸ ಕಾರ್ಯಗಳಿಂದ ಕೀರ್ತಿ ಸಂಪಾದನೆ. ಗೃಹದಲ್ಲಿ ಸಂತಸ.

ಧನು: ಆರೋಗ್ಯ ವೃದ್ಧಿ. ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ ದಾನಧರ್ಮ ನಿರತ. ಗುರುಹಿರಿಯರ ಪ್ರೀತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಮನೆಯಲ್ಲಿ ಸಂತಸದ ಸಂಭ್ರಮ.

ಮಕರ: ಆರೋಗ್ಯ ಗಮನಿಸಿ. ಈ ದಿನ ಸಾಮಾನ್ಯ ಫ‌ಲದಾಯಕ. ಯಾವುದೇ ಸಾಹಸ ಪ್ರವೃತ್ತಿ ಸಲ್ಲದು. ತಾಳ್ಮೆ ಸಮಾಧಾನದಿಂದ ಸಮಯ ಕಳೆಯಿರಿ. ವಿಶ್ರಾಂತಿ ಪಡೆಯಿರಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಕುಂಭ: ಆರೋಗ್ಯ ವೃದ್ಧಿ . ಮಕ್ಕಳ ನಿಮಿತ್ತ ಸಂತೋಷ ವೃದ್ಧಿ. ಹೆಚ್ಚಿದ ವರಮಾನ. ಬಂಧುಮಿತ್ರರಿಂದಲೂ, ಉದ್ಯೋಗ ವ್ಯವಹಾರದಿಂದಲೂ ಅನಿರೀಕ್ಷಿತ ಪ್ರಗತಿ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಗೃಹೋಪಯೋಗಿ ವಸ್ತುಗಳ ಸಂಗ್ರಹ.

ಮೀನ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಧನಾರ್ಜನೆ ಯಲ್ಲಿ ಮುನ್ನಡೆ. ಆಸ್ತಿ ವಿಚಾರದಲ್ಲಿ ಪ್ರಗತಿಪರ ಬದಲಾವಣೆ ಸಂಭವ. ಮಕ್ಕಳಿಂದಲೂ ಸಿಹಿ ವಾರ್ತೆ.

Advertisement

Udayavani is now on Telegram. Click here to join our channel and stay updated with the latest news.

Next