ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ. ಸಿಡಿಲು ಮಿಂಚಿನಿಂದ ಮಳೆಯಾಗಿದ್ದ ಪರಿಣಾಮ ಒಂದು ಸಾವಿರ ಅಡಿ ಎತ್ತರದ ಐತಿಹಾಸಿಕ ಗಡಾಯಿಕಲ್ಲಿಗೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡಿದೆ.
ಸೋಮವಾರ ಶಿಬಾಜೆ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದ್ದು, ಮಂಗಳವಾರ ಅಳದಂಗಡಿ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ.
ಒಂದು ತಾಸಿಗೂ ಅಧಿಕ ಕಾಲ ಗಾಳಿ ಮಳೆಯಾಗಿದ್ದು. ಸಿಡಿಲಿನ ರಭಸಕ್ಕೆ ಗಡಾಯಿಕಲ್ಲಿನಲ್ಲಿ ಕೆಲ ಕಾಲ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ.
ಕಳೆದ ವರ್ಷವೂ ಸಿಡಿಲಾಘಾತದಿಂದ ಗಡಾಯಿಕಲ್ಲಿನ ಒಂದು ಪಾರ್ಶ್ವದ ಕಲ್ಲಿನ ತುಣುಕು ಬಿದ್ದು ಸ್ಫೋಟದಂತ ಸದ್ದು ಉಂಟಾಗಿ ಆತಂಕ ಮೂಡಿಸಿತ್ತು. ಮಳೆಗಾಲದಲ್ಲಿ ಇದು ಸಾಮಾನ್ಯವಾಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇದನ್ನೂ ಓದಿ: ಶೃಂಗೇರಿಯಲ್ಲಿ ಮಳೆ-ಗಾಳಿ ಅಬ್ಬರ: ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮರ, ತಪ್ಪಿದ ಅನಾಹುತ