Advertisement
‘ವಾಯು’ವನ್ನು ಸಮರ್ಥವಾಗಿ ಎದುರಿಸಲು ಗುಜರಾತ್ ಸರಕಾರ ಸಿದ್ಧತೆ ಪೂರ್ಣಗೊಳಿಸಿದೆ. ಜೂ. 13ರಂದು ಚಂಡಮಾರುತವು ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದ್ದು, ಸೌರಾಷ್ಟ್ರ ಮತ್ತು ಕಛ್ ಕರಾವಳಿ ಪ್ರದೇಶಗಳಲ್ಲಿ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಮತ್ತು ಧಾರಾಕಾರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದಿಲ್ಲಿಯಲ್ಲಿ ಹಿರಿಯ ಅಧಿಕಾರಿಗಳ ಜತೆಗೆ ಈ ಕುರಿತು ಸಭೆಯನ್ನೂ ನಡೆಸಿದ್ದಾರೆ.
ಈ ಬಾರಿ ಚಂಡಮಾರುತದ ಬೆಳವಣಿಗೆಗಳ ಬಗ್ಗೆ ತಾಜಾ ಮಾಹಿತಿ ನೀಡಲು ಇಸ್ರೋ ವಿಶೇಷ ಕಣ್ಗಾವಲು ಇಡಲಿದೆ. ಉಳಿದಂತೆ ಎನ್‌ಡಿಆರ್‌ಎಫ್ನ 15 ವಿಶೇಷ ತಂಡಗಳು ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ನಿಯೋಜನೆಗೊಂಡಿವೆ. ಇದರ ಜತೆಗೆ ಸೇನೆ, ಐಎಎಫ್, ನೌಕಾಪಡೆಗೂ ನೆರವು ನೀಡುವಂತೆ ಮನವಿ ಮಾಡಲಾಗಿದ್ದು, ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಸೂಚಿಸಲಾಗಿದೆ.