ಕೊರಟಗೆರೆ: ಗುಡುಗು ಹಾಗೂ ಸಿಡಿಲಿನ ರಭಸಕ್ಕೆ ಕುರಿಮಂದೆಯಲ್ಲಿನ 13 ಕುರಿಗಳು ಸಾವಿಗೀಡಾದ ಘಟನೆ ಕೊರಟಕಗೆರೆ ತಾಲೂಕಿನ ಹೊಳವನಹಳ್ಳಿ ಭಾಗದಲ್ಲಿ ಜರುಗಿದೆ.
ತಾಲೂಕಿನ ಹೊಳವನಹಳ್ಳಿ ಸಮೀಪದ ಮಲ್ಲೇಶಯ್ಯನವರ ತೋಟದ ಬಳಿ ಈ ಘಟನೆ ಜರುಗಿದ್ದು, ಶಿರಾ ತಾಲೂಕಿನ ಮೇಲ್ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದ ಗಂಗಮ್ಮ ಹಾಗೂ ಈರಣ್ಣ ಎಂಬುವರಿಗೆ ಸೇರಿದ ಕುರಿಗಳಾಗಿವೆ ಎನ್ನಲಾಗಿದೆ.
ಇದನ್ನೂ ಓದಿ:ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ: ಶಾಸಕ ಡಾ.ಜಿ ಪರಮೇಶ್ವರ್
ಹೊಳವನಹಳ್ಳಿ ಹೊರವಲಯದ ಮಲ್ಲೇಶಯ್ಯ ಎಂಬವರ ತೋಟದ ಬಳಿ ಕುರಿ ಮಂದೆಯನ್ನುಹಾಕಲಾಗಿದ್ದು, ಮಧ್ಯರಾತ್ರಿ ಸಿಡಿಲಿನ ರಭಸಕ್ಕೆ 11 ಕುರಿ ,1ಟಗರು,1ಮೇಕೆ ಸೇರಿದಂತೆ ಒಟ್ಟು 13 ಕುರಿಗಳು ಸ್ಥಳದಲ್ಲಿ ಸಾವಿಗೀಡಾಗಿದ್ದು, ಕುರಿಗಾರರಿಗೆ ಕುರಿ ಸಾವಿನ ಬಗ್ಗೆ ಅರಿವಿಲ್ಲದೆ ಮುಂಜಾನೆ ಜಾಗ ಬದಲಾಯಿಸುವ ಸಂದರ್ಭದಲ್ಲಿ ಕುರಿ ಸಾವಿಗೀಡಾಗಿರುವ ವಿಚಾರ ತಿಳಿದು ಬಂದಿದ್ದು, ಕುರಿಗಾರರು ಅದೃಷ್ಟವಶಾತ್ ಸಾವು ನೋವಿನಿಂದ ಪಾರಾಗಿದ್ದಾರೆ ಎನ್ನಲಾಗಿದೆ .
ತಹಸೀಲ್ದಾರ್ ನಹೀದಾ ಜಮ್ ಜಮ್ ಸ್ಥಳಕ್ಕೆ ಭೇಟಿ ನೀಡಿ ಒಂದೇ ದಿನದಲ್ಲಿ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ 39 ಸಾವಿರ ರೂಗಳ ಚೆಕ್ ವಿತರಿಸಿದ್ದಾರೆ ಎನ್ನಲಾಗಿದೆ.