ಆಲೂರು : ತಾಲೂಕಿನ ಕೆಲವು ಕಡೆಗಳಲ್ಲಿ ಸುರಿದ ಗುಡುಗು – ಸಿಡಿಲು ಮಿಶ್ರಿತ ಮಳೆ ಸುರಿದಿದ್ದು, ತಾಲ್ಲೂಕಿನ ಹಸಗನೂರು ಗ್ರಾಮದಲ್ಲಿ ಸಿಡಿಲು ಬಡಿದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಮೃತಪಟ್ಟಿದ್ದು ಮನೆಯಲ್ಲಿ ಮಲಗಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಶನಿವಾರ ರಾತ್ರಿ ನಡೆದಿದೆ.
ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಗನೂರು ಗ್ರಾಮದ ವೆಂಕಟೇಶ್ ಎಂಬುವವರ ಹಸುವನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದ ಸಂದರ್ಭದಲ್ಲಿ ಶನಿವಾರ ರಾತ್ರಿ 12 ಘಂಟೆ ಸುಮಾರಿಗೆ ಸುರಿದ ಗುಡುಗು-ಸಿಡಿಲು ಮಿಶ್ರಿತ ಮಳೆಗೆ ಸುಮಾರು ಐವತ್ತು ಸಾವಿರ ಬೆಲೆ ಬಾಳುವ ನಾಟಿ ಕ್ರಾಸ್ ಸಿಂಧು ಹಸುವೊಂದು ಮೃತಪಟ್ಟಿದೆ ಮನೆಯಲ್ಲಿ ಮಲಗಿದ್ದ ವೆಂಕಟೇಶ್ ಪತ್ನಿ ಸಾವಿತ್ರಮ್ಮನಿಗೂ ಗಂಭೀರವಾದ ಗಾಯಗಳಾಗಿದ್ದು ಅದೃಷ್ಟವಶಾತ್ ಸಾವಿನಿಂದ ಪಾರಗಿದ್ದಾರೆ ಸಿಡಿಲಿನ ರಭಸಕ್ಕೆ ಮನೆಯ ಗೋಡೆಗಳು ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸ್ಥಳಕ್ಕೆ ಬಿಜೆಪಿ ಹಿರಿಯ ಮುಖಂಡ ಸಿಮೆಂಟ್ ಮಂಜುನಾಥ್ ಭೇಟಿ ನೀಡಿ ಗಾಯಾಳು ಸಾವಿತ್ರಮ್ಮ ಅವರ ಆರೋಗ್ಯ ವಿಚಾರಿಸಿದ್ದಾರೆ. ಸಾವಿತ್ರಮ್ಮ ಕುಟುಂಬ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ ಅದರಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಗುಡುಗು ಸಿಡಿಲಿನಿಂದ ಜೀವನೋಪಾಯಕ್ಕೆ ದಾರಿಯಾಗಿದ್ದ ಹಸುವನ್ನು ಕಳೆದುಕೊಂಡಿದ್ದಾರೆ ಕಂದಾಯ ಇಲಾಖೆ ವಿಕೋಪದಡಿಯಲ್ಲಿ ರೈತನಿಗೆ ಪರಿಹಾರ ನೀಡಬೇಕು ಅದೇ ರೀತಿ ಸಾವಿತ್ರಮ್ಮ ಆಸ್ಪತ್ರೆ ಖರ್ಚುನ್ನು ಬರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಇದನ್ನೂ ಓದಿ : ಆರ್ ಎಸ್ ಎಸ್ ಬಗ್ಗೆ ಮಾತಾಡಿದ್ರೆ ಹುಷಾರ್..! ಸಿದ್ದರಾಮಯ್ಯಗೆ ಆರ್.ಅಶೋಕ್ ಎಚ್ಚರಿಕೆ
ನಂತರ ಸ್ಥಳಕ್ಕೆ ಪಶು ವೈದ್ಯಾದಿಕಾರಿ ಡಾ.ರವೀಂದ್ರ ಭೇಟಿ ನೀಡಿ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು ಕಂದಾಯ ನಿರೀಕ್ಷಕ ಸಿಬ್ಬಂದಿ ದೇವರಾಜು ಇದ್ದರು. ಪಶು ವೈದ್ಯರಿಂದ ಹಸು ಮೃತಮಟ್ಟಿರುವ ಬಗ್ಗೆ ವರದಿ ಪಡೆದು ನಂತರ ಪ್ರಕೃತಿ ವಿಕೋಪದಡಿಯಲ್ಲಿ ರೈತರಿಗೆ ಪರಿಹಾರ ನೀಡುವುದಾಗಿ ತಹಶಿಲ್ದಾರ್ ಸೌಮ್ಯ ಭರವಸೆ ನೀಡಿದ್ದಾರೆ ಎಂದು ಕದಾಳು ಗ್ರಾಮ ಪಂಚಾಯಿತಿ ಸದಸ್ಯ ಮುಕ್ತೇಶ್ ತಿಳಿಸಿದರು.