Advertisement

ಊಹಾಪೋಹಕ್ಕೆ ಎಡೆಯಾದ ಹೆಬ್ಬೆರಳು!

02:43 PM Nov 07, 2022 | Team Udayavani |

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆ ತುರ್ತು ನಿಗಾ ಘಟಕ ಬಳಿಯ ಹೊರ ಪೊಲೀಸ್‌ ಠಾಣೆ ಹತ್ತಿರ ರವಿವಾರ ತುಂಡರಿಸಿದ್ದ ಹೆಬ್ಬೆರಳು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಆ ಬೆರಳು ಯಾರದೆಂಬುದು ಗೊತ್ತಾದ ಮೇಲೆ ಗೊಂದಲಕ್ಕೆ ತೆರೆಬಿದ್ದಿತು.

Advertisement

ತಡಸ ಗ್ರಾಮದ ಸಿದ್ದಪ್ಪ ಎಂಬುವರು ಸೊಪ್ಪು ಕತ್ತರಿಸುವಾಗ ಆಕಸ್ಮಾತ್‌ ಅವರ ಹೆಬ್ಬೆರಳು ತುಂಡರಿಸಿತ್ತು. ಅದನ್ನು ವೈದ್ಯರು ಜೋಡಿಸಬಹುದೆಂದು ನೀರಿನ ಡಬ್ಬದಲ್ಲಿ ಹಾಕಿಕೊಂಡು ಶನಿವಾರ ರಾತ್ರಿ ಕಿಮ್ಸ್‌ ಆಸ್ಪತ್ರೆಗೆ ಬಂದಿದ್ದಾರೆ.

ಆದರೆ ವೈದ್ಯರು ಅದರ ಮರುಜೋಡಣೆ ಅಸಾಧ್ಯ. ಅದನ್ನು ಕಸದಬುಟ್ಟಿಗೆ ಹಾಕಿ ಎಂದು ತಿಳಿಸಿದ್ದಾರೆ. ಆದರೆ ಸಿದ್ದಪ್ಪ ಅವರು ಅದನ್ನು ಕಿಮ್ಸ್‌ ತುರ್ತು ನಿಗಾಘಟಕ ಬಳಿಯ ಹೊರ ಪೊಲೀಸ್‌ ಠಾಣೆ ಹತ್ತಿರ ಬಿಸಾಡಿದ್ದಾರೆ. ರವಿವಾರ ಬೆಳಗ್ಗೆ ಅದನ್ನು ಜನರು ನೋಡಿದಾಗ ಗೊಂದಲವುಂಟಾಗಿ ಹಲವು ಊಹಾಪೋಹಗಳಿಗೆ ಎಡೆಮಾಡಿದೆ. ಅಲ್ಲದೆ ಕೆಲಕಾಲ ಆತಂಕಕ್ಕೆ ಕಾರಣವಾಯಿತು.

ವಿಷಯ ತಿಳಿದು ವಿದ್ಯಾನಗರ ಠಾಣೆ ಇನ್ಸ್‌ಪೆಕ್ಟರ್‌ ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ವೈದ್ಯರಿಂದ ಮಾಹಿತಿ ಕಲೆ ಹಾಕಿ, ಆ ಬೆರಳು ಯಾರದು ಎಂಬುದನ್ನು ಪತ್ತೆ ಮಾಡಿದ ಬಳಿಕ ಕಿಮ್ಸ್‌ ಆವರಣದಲ್ಲಿ ಹಬ್ಬಿದ್ದ ಊಹಾಪೋಹಕ್ಕೆ ತೆರೆಬಿತ್ತು. ಸಿದ್ದಪ್ಪ ಅವರಿಗೆ ತಡಸ ಪೊಲೀಸ್‌ ಠಾಣೆಯಲ್ಲಿ ಎಂಎಲ್‌ಸಿ ಮಾಡಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next