ಚಿ.ನಿ.ಪುರುಷೋತ್ತಮ್
ತುಮಕೂರು: ಸಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆ ಮಾಡಲು ಸಿದ್ಧತೆ ನಡೆಯುತ್ತಿರು ವಂತೆ ಚಿಕ್ಕನಾಯಕ ನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ.ಮಾಧುಸ್ವಾಮಿ ಸಚಿವ ಸಂಪುಟದಲ್ಲಿ ಖಾತೆ ಪಡೆಯಲಿ ದ್ದಾರೆ ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿ ಗರಿಗೆದರಿದೆ.
ಅಭಿವೃದ್ಧಿ ಮರೀಚಿಕೆ: ಜಿಲ್ಲೆಯಲ್ಲಿಯೇ ಅತಿ ಹಿಂದುಳಿದಿರುವ ಚಿಕ್ಕನಾಯಕನಹಳ್ಳಿ ತಾಲೂಕು ಗಣಿಗಾರಿಕೆಯಿಂದ ಹೆಸರು ಪಡೆದರೂ ಇಲ್ಲಿಯ ಜನರಿಗೆ ಉದ್ಯೋಗ ವಿಲ್ಲದೆ ವಲಸೆ ಹೋಗುವುದು ನಿಂತಿಲ್ಲ. ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ದೂರದ ಮಾತಾಗಿತ್ತು. ಕಾರಣ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪಕ್ಷದ ಶಾಸಕರು ಇಲ್ಲಿ ಗೆಲ್ಲುತ್ತಿರಲಿಲ್ಲ.
ಒಮ್ಮೆ ಮಾತ್ರ ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ 1979ರಲ್ಲಿ ಎನ್.ಬಸವಯ್ಯ ಭಾರಿ ಮತ್ತು ಮಧ್ಯಮ ನೀರಾವರಿ, ಮುಜರಾಯಿ ಖಾತೆ ಸಚಿವರಾಗಿದ್ದರು. ಆದರೆ ಹೆಚ್ಚು ದಿನ ಸಚಿವರಾಗಿಲಿಲ್ಲ. ಆ ನಂತರ ಆಡಳಿತ ಪಕ್ಷದ ಶಾಸಕರು ಗೆದ್ದೆ ಇಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಜೆ.ಸಿ. ಮಾಧುಸ್ವಾಮಿ ಗೆಲುವು ಸಾಧಿಸಿದ್ದರೂ, ಬಿಜೆಪಿಗೆ ಅಧಿಕಾರ ಸಿಕ್ಕಿರಲಿಲ್ಲ. ಮಾಧುಸ್ವಾಮಿ ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್ ವಿಚಾರಧಾರೆಯಿಂದ ಬಂದವರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕಟ್ಟಾ ಅನುಯಾಯಿ ಯಾಗಿದ್ದರು. ಹಾಲು ಉತ್ಪಾದಕರ ಸಹಕಾರಿ ಸಂಘದ ಮೂಲಕ ರಾಜಕೀಯಕ್ಕೆ ಬಂದರು.
4 ಬಾರಿ ಗೆಲುವು: 1989ರಲ್ಲಿ ಮೊದಲ ಬಾರಿ ಜನತಾದಳದಿಂದ ಶಾಸಕರಾಗಿ ಆಯ್ಕೆ ಯಾದರು. 1994ರಲ್ಲಿ ಸೋಲು ಕಂಡರು. ಎನ್.ಬಸವಯ್ಯ ನಿಧನದಿಂದ ತೆರವಾದ ಸ್ಧಾನಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. 2004 ರಲ್ಲಿ ಜೆಡಿಯು ನಿಂದ ಗೆದ್ದರು. 2013ರಲ್ಲಿ ನಡೆದ ಚುನಾ ವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವ ದಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು.
ಈಗ 2018ರಲ್ಲಿ ಗೆದ್ದು ಬಿಜೆಪಿಯಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಜಿಲ್ಲೆಗೆ ಎರಡು ಸಚಿವ ಸ್ಧಾನ ನೀಡುವುದಾದರೆ ತಿಪಟೂರು ಶಾಸಕ ಬಿ.ಸಿ ನಾಗೇಶ್‌ಗೂ ಸಿಗುವ ಅವಕಾಶ ಇದೆ.
ಸಂತಸ: ಜೆ.ಸಿ.ಮಾಧುಸ್ವಾಮಿ ಸಚಿವರಾಗಿ ತಾಲೂಕಿನ ಮತ್ತು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನೀಗಿಸುತ್ತಾರೆ ಎನ್ನುವ ಆಶಾಭಾವನೆ ಇದೆ. ಮಾಧುಸ್ವಾಮಿ ನೀರಾವರಿ ಸಚಿವರಾಗಬೇಕು. ನೀರಿನ ಸಮಸ್ಯೆ ನೀಗಿಸಬೇಕು ಎಂದು ಅವರ ಅಭಿ ಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.