Advertisement

ಕೇಬಲ್ ನಿಖರ ಮಾಹಿತಿ ಇಲ್ಲದೇ ಪ್ರಗತಿ ವಿಳಂಬ

04:42 PM Aug 22, 2019 | Team Udayavani |

ತುಮಕೂರು: ನಗರದಲ್ಲಿ ಕೇಬಲ್ಗಳು ಹಾದು ಹೋಗಿರುವ ಮಾರ್ಗದ ನಿಖರ ಮಾಹಿತಿ ನೀಡಿ ಸ್ಮಾರ್ಟ್‌ಸಿಟಿ ರಸ್ತೆ ಕಾಮಗಾರಿ ತ್ವರಿತವಾಗಿ ನಡೆಯಲು ಅನುವು ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ ಕುಮಾರ್‌ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ಕುರಿತ ಸಮನ್ವಯ ಸಮಿತಿಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಬಿಎಸ್‌ಎನ್‌ಎಲ್ ಕೇಬಲ್ಗಳ ನಿಖರ ಮಾಹಿತಿಯಿಲ್ಲದಿರುವುದರಿಂದ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೈಗೊಂಡಿರುವ ಸ್ಮಾರ್ಟ್‌ ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಬಿಎಸ್‌ಎನ್‌ಎಲ್ ಕೇಬಲ್ಗಳ ನಿಖರ ಮಾಹಿತಿಯಿಲ್ಲದೆ ಸ್ಮಾರ್ಟ್‌ ರಸ್ತೆ ಪ್ರಗತಿ ವಿಳಂಬವಾಗಿದೆ. ಪ್ರಗತಿ ಕಾರ್ಯದಲ್ಲಿ ಬಿಎಸ್‌ಎನ್‌ಎಲ್ ಕೇಬಲ್ಗಳಿಗೆ ಹಾನಿಯಾದರೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹೊಣೆಯಾ ಗುವುದಿಲ್ಲ ಎಂದರು.

ನಿಯಮ ಉಲ್ಲಂಘಿಸಿದರೆ ಕ್ರಮ: ರಸ್ತೆ ಅಗೆಯುವ ಹಾಗೂ ಚೇಂಬರ್‌ ನಿರ್ಮಿಸುವ ಸಂದರ್ಭ ಬಿಎಸ್‌ಎನ್‌ಎಲ್ ಅಧಿಕಾರಿಗಳು ಖುದ್ದು ಹಾಜರಿದ್ದು, ಕೇಬಲ್ ಲೇಯಿಂಗ್‌ ಮಾಹಿತಿ ನೀಡಿ ಸಹಕರಿಸಬೇಕು. ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಳ್ಳುವ ಎಲ್ಲ ಕಾಮ ಗಾರಿಗಳು ಶಾಶ್ವತ ಕಾಮಗಾರಿಗಳಾಗಬೇಕು. ಸ್ಮಾರ್ಟ್‌ ರಸ್ತೆ ಪೂರ್ಣಗೊಂಡ ಬಳಿಕ ಯಾವುದೇ ಕಾರಣಕ್ಕೂ ಮತ್ತೆ ರಸ್ತೆ ಅಗೆಯಲು ಅವಕಾಶ ನೀಡುವುದಿಲ್ಲ. ಕೈಗೊಂಡ ಕಾಮಗಾರಿಗಳನ್ನೇ ಮತ್ತೆ ಅನಗತ್ಯವಾಗಿ ಕೈಗೊಳ್ಳುವುದರಿಂದ ಸಾರ್ವ ಜನಿಕ ಹಣ ಪೋಲು ಮಾಡಿದಂತಾಗುತ್ತದೆ. ನಿಯಮ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಸರ್ವೆ ಮುಗಿಸಿ: ನಗರದ ಕುಣಿಗಲ್-ಗುಬ್ಬಿ ರಸ್ತೆ ಹಾಗೂ ಬಿ.ಎಚ್.ರಸ್ತೆಯಲ್ಲಿ ಕೆಲವು ಕಡೆ ಸ್ಥಳದ ವಿವಾದಗಳಿರುವ ಕಾರಣ 15 ದಿನಗಳೊಳಗೆ ಸರ್ವೆ ಮುಗಿಸಿ ಮುಂದಿನ ದಿನಗಳಲ್ಲಿ ಒತ್ತುವರಿ ಯಾಗದಂತೆ ಗಡಿ ಗುರುತು ಮಾಡಿ ಕಲ್ಲು ನೆಡಬೇಕೆಂದು ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ವರ್ತುಲ ರಸ್ತೆ ಮೇಲೆ ಹಾದು ಹೋಗಿರುವ ಹೈಟೆನ್ಶನ್‌ ಕೇಬಲ್ ಹಾಗೂ ಮ್ಯಾನ್‌ಹೋಲ್ ಸ್ಥಳಾಂತರಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಾಮಗಾರಿ ಪೂರ್ಣಗೊಳಿಸಿ: ನಗರದಲ್ಲಿ ಅಭಿವೃದ್ಧಿಪಡಿಸುತ್ತಿರುವ 17 ಸ್ಮಾರ್ಟ್‌ ರಸ್ತೆ ಹಾಗೂ 83 ರೋಡ್‌ಶೋಲ್ಡರ್‌ ಸ್ಥಳಗಳಿಗೆ ಪಾಲಿಕೆ, ಸ್ಮಾರ್ಟ್‌ಸಿಟಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಸ್ಕಾಂ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಕಂಡುಬರುವ ನ್ಯೂನ್ಯತೆ ಸರಿಪಡಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು. ಸ್ಮಾರ್ಟ್‌ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಹಾಗೂ ಸ್ಥಳಾಂತರಿಸಬೇಕಾಗಿರುವ ಬೀದಿದೀಪ, ವಿದ್ಯುತ್‌ ಕಂಬಗಳ ಪಟ್ಟಿ ಕೂಡಲೇ ಪಾಲಿಕೆಗೆ ನೀಡಬೇಕು ಎಂದು ಸ್ಮಾರ್ಟ್‌ಸಿಟಿ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಹೆಲಿ ಟ್ಯಾಕ್ಸಿ ಯೋಜನೆ ಅನುಷ್ಠಾನ ಗೊಳಿಸಲು 6617 ಎಕರೆ ವಿಸ್ತೀರ್ಣದ ಭೂಪ್ರದೇಶ ಅವಶ್ಯವಿದ್ದು, ಈ ಯೋಜನೆಯ ಪ್ರಾರಂಭಿಕ ಹಂತವಾಗಿ ರೀಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್ ಯುನಿಟ್ ಸ್ಥಾಪಿಸುವ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು.

ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ. ಭೂಬಾಲನ್‌ ಹಾಗೂ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ. ಅಜಯ್‌, ವಿವಿಯ ಕುಲಸಚಿವ ಗಂಗಾನಾಯಕ, ಬಿ.ಟಿ. ರಂಗಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next