Advertisement

ಪೊಲೀಸ್ ವೇಷದಲ್ಲಿ ಬಂದು ಮಹಿಳೆ ಮೇಲೆ ಅತ್ಯಾಚಾರ ಎಸಗಿ, ನಗ, ನಾಣ್ಯ ಎಗರಿಸಿದ  ಭೂಪ!

07:24 PM Oct 06, 2021 | |

ಕುಣಿಗಲ್ : ಪೊಲೀಸ್ ಎಂದು ಸುಳ್ಳು ಹೇಳಿ ಮಹಿಳೆಯನ್ನು ಬೆದರಿಸಿ, ನಿರ್ಜನ ಪ್ರದೇಶಕ್ಕೆ ಕರೆದ್ಯೋದು ಅತ್ಯಾಚಾರ ಎಸಗಿ, ಚಾಕು ತೋರಿಸಿ ನಗದು ಸೇರಿದಂತೆ, ಮಾಂಗಲ್ಯ ಸರ, ಮೋಬೈಲ್ ಪೋನ್  ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿಸುವಲ್ಲಿ ಅಮೃತೂರು ಪೊಲೀಸರು ಯಶಸ್ವಿಯಾಗಿದ್ದಾರೆ,

Advertisement

ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ದೊಡ್ಡನಗನಹಳ್ಳಿ ಗ್ರಾಮದ ವಾಸಿ ಕಾರು ಚಾಲಕ ಪ್ರದೀಪ್ ಅಲಿಯಾಸ್ ಕೆಂಚಪ್ರದಿ (37) ಬಂಧಿತ ಆರೋಪಿ.

ಇದನ್ನೂ ಓದಿ:“ಹಸಿರು ಕ್ರಾಂತಿ” ಸಂಪಾದಕ ಕಲ್ಯಾಣರಾವ್ ನಿಧನಕ್ಕೆ ಸಿ ಎಂ ಬೊಮ್ಮಾಯಿ ಸಂತಾಪ

ಘಟನೆ ವಿವರ :  ಅ 1 ರಂದು ಸಂಜೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದ ಮಹಿಳೆ ಕುಣಿಗಲ್ ಪಟ್ಟಣಕ್ಕೆ ಬಂದು, ತಮ್ಮ ಗ್ರಾಮಕ್ಕೆ ಬೈಕ್‌ನಲ್ಲಿ ವಾಪಸ್ಸ್ ಹೋಗಬೇಕಾದರೆ, ಆರೋಪಿ ಪದೀಪ್ ಕುಣಿಗಲ್ ಪಟ್ಟಣದ ಬಿದನಗೆರೆ ಬಳಿ ಮಹಿಳೆಯನ್ನು ಅಡ್ಡಗಟ್ಟಿ ನಾನು ಪೊಲೀಸ್ ಆಗಿದ್ದು, ಯಾವುದೋ ಒಂದು ಕೇಸ್ ಸಂಬಂಧ ನಿಮ್ಮನು ಠಾಣೆಗೆ ಕರೆದುಕೊಂಡು ಬನ್ನಿ ಎಂದು ಸಬ್ ಇನ್ಸ್ಸ್ಪೆಕ್ಟರ್ ತಿಳಿಸಿದ್ದಾರೆ ಎಂದು ಮಹಿಳೆಯನ್ನು ಭಯಪಡಿಸಿ ಬಲವಂತದಿಂದ ಆಕೆಯ ಬೈಕಿನಲ್ಲಿಯೇ ಎಡಿಯೂರು ಬಳಿ ಇರುವ ಶ್ರೀನಿವಾಸ ದೇವರ ಬೆಟ್ಟಕ್ಕೆದ ನಿರ್ಜನ ಪ್ರದೇಶಕ್ಕೆ ಕೆರೆದುಕೊಂಡು ಹೋಗಿ ಸಬ್ ಇನ್ಸ್ಸ್ಪೆಕ್ಟರ್  ಅವರು ಇಲ್ಲೇ ಬರುತ್ತಾರೆ ಎಂದು ಹೇಳಿದ ಆರೋಪಿ ನೀವು ಇಲ್ಲಿಯೇ ಇರಿ ಎಂದು ಇರಿಸಿಕೊಂಡು, ನಂತರ ಆಕೆಯನ್ನು ಬೆದರಿಸಿ, ಯಾರೂ ಇಲ್ಲದ ಬಗ್ಗೆ ಖಚಿತಪಡಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿ, ಬಳಿಕ ಚಾಕು ತೋರಿಸಿ ಆಕೆಯ ಕೊರಳಿಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರ, ಮೋಬೈಲ್ ಪೋನ್, ಎಟಿಎಂ ಕಾರ್ಡ್ ಮತ್ತು ಹಣವಿದ್ದ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದ.

ಈ ಕುರಿತಾಗಿ ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್,  ಎಎಸ್‌ಪಿ ಟಿ.ಜಿ.ಉದ್ದೇಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜಿ.ಆರ್.ರಮೇಶ್,  ಸಿಪಿಐ ಗುರುಪ್ರಸಾದ್, ಪಿಎಸ್‌ಐ ಮಂಜುನಾಥ್ ಅವರ ನೇತೃತ್ವದ ಪೊಲೀಸ್ ಸಿಬ್ಬಂದಿಗಳು ದೇವಲಾಪುರ ಹೋಬಳಿಯ ದೊಡ್ಡನಗನಹಳ್ಳಿ ಗ್ರಾಮದ ತನ್ನ ಮನೆಯಲ್ಲಿ ಅಡಗಿದ್ದ ಆರೋಪಿ ಪ್ರದೀಪನನ್ನು ಬಂಧಿಸಿದ್ದಾರೆ,  ಬಂಧಿತನಿಂದ ಮಾಂಗಲ್ಯ ಸರ, ಪರ್ಸ್, ಬೈಕ್, ಚಾಕವನ್ನು ವಶಪಡಿಸಿಕೊಂಡಿದ್ದಾರೆ,

Advertisement

17 ಪ್ರಕರಣದಲ್ಲಿ ಭಾಗಿ :  ಆರೋಪಿ ಪ್ರದೀಪನು ಈಗಾಗಲೇ ಬೆಂಗಳೂರು ನಗರದ ಬ್ಯಾಟರಾಯನಪುರ, ಬಸವೇಶ್ವರನಗರ,  ಚನ್ನಪಟ್ಟಣ,  ಶಿವಳ್ಳಿ,  ಮೈಸೂರು ನಗರದ ಜಯಪುರ,  ಸರಸ್ವತಿಪುರ,  ವಿಜಯನಗರ, ಹೋಳನರಸಿಪುರ, ನಾಗಮಂಗಲ, ಬೆಳ್ಳೂರು ಕ್ರಾಸ್, ತಾವರೇಕೆರೆ, ಪಾಂಡುಪುರ, ಗೊರೂರು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  17 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಹಲವಾರು ಭಾರಿ ಒಂಟಿ ಮಹಿಳೆಯನ್ನು ಗುರುತಿಸಿ ಅವರಿಗೆ ತಾನು ಪೊಲೀಸ್ ಎಂದು ಸುಳ್ಳು ಹೇಳಿಕೊಂಡು ಮಹಿಳೆಯನ್ನು ಬೆದರಿಸಿ ಬೆಲೆ ಬಾಳುವ ಚಿನ್ನದ ವಡವೆ ಹಾಗೂ ಇತರೆ ವಸ್ತುಗಳನ್ನು ಸುಲಿಗೆ ಮಾಡಿ ಹಲವಾರು ಭಾರಿ ಜೈಲಿಗೆ ಹೋಗಿ ಬಂದಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next