ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಬಂದ ಸೋನೆಮಳೆಗೆ ಶ್ರೀ ಮೃಂದದೇವಿ ಮಲ್ಲಿಕಾರ್ಜುನ ಸ್ವಾಮಿದೇವಾಲಯದ ಗೋಪುರ ಕುಸಿದು ಬಿದ್ದಿದ್ದು, ಮುಜುರಾಯಿ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದ ಭಕ್ತರ ಭಾವನೆಗೆ ಧಕ್ಕೆಯಾಗಿದೆ. ದೇವಾಲಯದಲ್ಲಿನಹುಂಡಿ ದುಡ್ಡು ಮಾತ್ರ ಮುಜುರಾಯಿ ಇಲಾಖೆಗೆಸೇರಿದೆಯೋ ಅಥವಾ ದೇವಾಲಯದ ಕಟ್ಟಡದಸ್ಥಿತಿಗತಿ ಗಮನಿಸಿ ಜೀರ್ಣೋದ್ಧಾರ ಮಾಡುವಕೆಲಸ ಇಲಾಖೆಗೆ ಬರುವುದಿಲ್ಲವೇ ಎಂಬುದುಗ್ರಾಮಸ್ಥರ ಪ್ರಶ್ನೆಯಾಗಿದೆ.
ತಾಲೂಕಿನ ಕಂದಿಕೆರೆ ಗ್ರಾಮದಲ್ಲಿನ 500 ವರ್ಷಗಳ ಇತಿಹಾಸವಿರುವ ಪಾಳೇಗಾರ ಹಾಗಲವಾಡಿಸಂಸ್ಥಾನದ ಕಾಲದಲ್ಲಿ ನಿರ್ಮಾಣವಾಗಿರುವ ಶ್ರೀಮೃಂದದೇವಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಗೋಪುರ ಬುಧವಾರ ರಾತ್ರಿ ಬಂದ ಸೋನೆಮಳೆಗೆ ಕುಸಿದು ಬಿದ್ದಿದೆ.
ಸೋನೆ ಮಳೆಗೆ ಬೀಳುವಸ್ಥಿತಿಯಲ್ಲಿ ದೇವಾಲಯದ ಕಟ್ಟಡವಿದ್ದು, ಪುರಾತನದೇವಾಲಯದ ಸಂರಕ್ಷಣೆ ಮುಜುರಾಯಿ ಇಲಾಖೆಗೆ ಸಂಬಂಧಪಟ್ಟಿಲ್ಲವೇ. ದೇವಾಲಯವುಮುಜುರಾಯಿ ಇಲಾಖೆಗೆ ಒಳಪಟ್ಟ ಮೇಲೆ ದೇವಾಲಯದ ಸಂರಕ್ಷಣೆ ಇಲಾಖೆಯದು ಅಲ್ಲವೇ.ಮುಜ ುರಾಯಿ ಇಲಾಖೆ ನಿರ್ಲಕ್ಷ್ಯದಿಂದ ಇತಿಹಾಸವಿರುವ ದೇವಾಲಯದ ಗೋಪುರ ಬಿದ್ದುಹೋಗಿದೆ.
ದೇವಾಲಯದ ಇತಿಹಾಸ: ಗ್ರಾಮದ ಈಶಾನ್ಯದಿಕ್ಕಿನಲ್ಲಿ ಈ ದೇವಾಲಯವಿದ್ದು, ಗರ್ಭಗುಡಿಯಲ್ಲಿಶಿವಲಿಂಗವಿದೆ. ಈ ಶಿವ ಲಿಂಗದ ಸುತ್ತ ಸಣ್ಣ ಲಿಂಗುಗಳಿದ್ದು, ಇದನ್ನು ಪಂಚಮುಖೀ ಶಿವಲಿಂಗ ಎಂದುಕರೆಯುತ್ತಾರೆ. ಶಿವಲಿಂಗದ ಮುಂಭಾಗ ಮೂರುನಂದಿ ವಿಗ್ರಹಗಳಿದೆ. ನಿರಂತರ ಈ ದೇವಾಲಯಕ್ಕೆಪೂಜೆ ಪುನಸ್ಕಾರ ನಡೆದುಕೊಂಡು ಬಂದಿದೆ.
ಗ್ರಾಮದಲ್ಲಿ ಮಳೆ ಅಭಾವ ಸೃಷ್ಟಿಯಾದರೆ ಈ ಶಿವಲಿಂಗುವಿಗೆ ನೀರನ್ನು ಗುಟುಕಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದ್ದು , ನಂಬಿಕೆ ನಿಜ ಆಗಿದೆ.ಕೆರೆಯದಡದಲ್ಲಿ ಈ ದೇವಾಲಯವಿದ್ದು, ಕೆರೆ ತುಂಬಿದಾಗ ಈ ದೇವರಿಗೆ ತೆಪ್ಪದ ಸೇವೆ ಮಾಡಲಾಗುತ್ತದೆ.
ಶೀಘ್ರ ದೇಗುಲ ಜೀಣೊìದ್ಧಾರ ಮಾಡಲಿ:ದೇವಾಲಯದ ಅಭಿವೃದ್ಧಿ ಹಾಗೂ ಮೂಲಭೂತಸೌಕರ್ಯಗಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಮುಜುರಾಯಿ ಇಲಾಖೆಯದಾಗಿದೆ. ಸರ್ಕಾರಕ್ಕೆ ಹೆಚ್ಚು ಆದಾಯ ತಂದು ಕೊಡುವ ದೇವಾಲಯಗಳ ಅಭಿವೃದ್ಧಿಗೆ ಮುಂದಾಗುವ ಇಲಾಖೆ.ಆದಾಯವಿಲ್ಲದ, ಪುರಾತನ ದೇವಾ ಲಯಗಳಅಭಿವೃದ್ದಿ ಆಸಕ್ತಿ ತೋರುವುದಿಲ್ಲ.
500 ವರ್ಷಗಳಇತಿಹಾಸವಿರುವ ಈ ದೇವಾಲಯಕ್ಕೆ ಮುಜುರಾಯಿ ಇಲಾಖೆಯಿಂದ ಹೆಚ್ಚು ಸೌಕರ್ಯ ಸಿಕ್ಕಿಲ್ಲ.ದೇವಾಲಯಕ್ಕೆ ಕಾಂಪೌಂಡ್ , ಕುಡಿಯುವ ನೀರುಸೇರಿದಂತೆಕನಿಷ್ಠ ಸೌಕರ್ಯ ಒದಗಿಸಿಲ್ಲ.
ಚೇತನ್