Advertisement

ಬೋನಿಗೆ ಬಿದ್ದ ಚಿರತೆ: ಜನತೆ ನಿರಾಳ

09:17 PM Jul 07, 2021 | Team Udayavani |

ತಿಪಟೂರು: ತಾಲೂಕಿನ ನೊಣವಿನಕೆರೆ ಹೋಬಳಿಯಸೂಗೂರು ಗ್ರಾಮದಲ್ಲಿ ಹಲವು ತಿಂಗಳಿಂದ ಗ್ರಾಮಸ್ಥರನಿದ್ದೆ ಗೆಡಿಸಿದ್ದ 5 ವರ್ಷದ ಹೆಣ್ಣು ಚಿರತೆಯೊಂದು ಅರಣ್ಯಇಲಾಖೆಯು ಸೋಮವಾರ ರಾತ್ರಿ ಇಟ್ಟಿದ್ದ ಬೋನಿಗೆಬಿದ್ದಿದ್ದು, ಗ್ರಾಮಸ್ಥರು ಈಗ ನಿರಾಳರಾಗಿದ್ದಾರೆ.

Advertisement

ಗ್ರಾಮದ ಹೊರವಲಯದಲ್ಲಿ ಬೀಡು ಬಿಟ್ಟಿದ್ದ ಚಿರತೆರೈತರಲ್ಲಿ ಆತಂಕ ಉಂಟು ಮಾಡಿತ್ತು. ಚಿರತೆ ಹಾವಳಿಯಿಂದಸಂಜೆಯಾದರೆ ಸಾಕು ಓಡಾಡಲು ಭಯ ಪಡುವಂತಾಗಿತ್ತು.ಹಸು, ಮೇಕೆ, ಕುರಿ ಮೇಯಿಸಲು ಹೊರಗೆಹೋಗುವಂತಿರಲಿಲ್ಲ. ಈಗಾಗಲೇ ಸಾಕಷ್ಟು ಜನರ ಕುರಿ,ಮೇಕೆಗಳು ಚಿರತೆ ಪಾಲಾಗಿದ್ದವು.

ಚಿರತೆ ಕಾಟತಡೆಯಲಾರದೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರುನೀಡಿದ್ದರ ಮೇರೆಗೆ ಇಲಾಖೆಯವರು ಚಿರತೆ ಹಿಡಿಯಲು ರೈತರ ಜಮೀನಿನಲ್ಲಿ ಬೋನು ಇಡಲಾಗಿತ್ತು. ಆಹಾರದಆಸೆಗೆ ಚಿರತೆ ಬೋನಿನಲ್ಲಿ ಸೆರೆಯಾಗಿದೆ.ಬೋನಿಗೆ ಬಿದ್ದಿದ್ದ ಚಿರತೆ ವೀಕ್ಷಿಸಲು ಸುತ್ತಮುತ್ತಲಿನಹಳ್ಳಿಗಳಿಂದ ಜನರು ಆಗಮಿಸಿದ್ದರು.

ಆರ್‌ಎಫ್ಒ ರಾಕೇಶ್‌ಕುಮಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಈಸಂದರ್ಭದಲ್ಲಿ ಉಪಅರಣ್ಯಾಧಿಕಾರಿ ಶಿವಕುಮಾರ್‌, ಅರಣ್ಯರಕ್ಷಕ ಪ್ರದೀಪ್‌, ಶಿವಪ್ಪ, ಚೌಡಪ್ಪ ಸೇರಿದಂತೆ ಸಿಬ್ಬಂದಿಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next