Advertisement

ಸಾಂಕ್ರಾಮಿಕ ರೋಗ ಹೆಚ್ಚಾಗಲು ನಿರ್ಲಕ್ಷ್ಯ ಕಾರಣ

04:39 PM Aug 01, 2019 | Naveen |

ತುಮಕೂರು: ಡೆಂಘೀ, ಚಿಕೂನ್‌ಗುನ್ಯಾ, ಮಲೇರಿಯಾ, ನಿಫಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗಲು ನಮ್ಮ ನಿರ್ಲಕ್ಷ್ಯ ಕಾರಣ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದೇಗೌಡ ಬೇಸರಿಸಿದರು.

Advertisement

ಮಹಾನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ನರ್ಸಿಂಗ್‌ ಕಾಲೇಜ್‌, ಎನ್‌ಸಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಡೆಂಘೀ ವಿರೋಧಿ ಮಾಸಾಚರಣೆಯಲ್ಲಿ ಮಾತನಾಡಿ ದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ರೋಗ ಹರಡದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿವಳಿಕೆ ಇದ್ದರೂ ಉದಾಸೀನ ತೋರುತ್ತಾರೆ ಎಂದು ಹೇಳಿದರು.

ಡೆಂಘೀ ಮುಕ್ತ ತುಮಕೂರಿಗೆ ಪಣ: ರೋಗ ವಾಸಿ ಮಾಡುವುದಕ್ಕಿಂತ ಹರಡದಂತೆ ನಿಯಂತ್ರಿ ಸುವುದೇ ಮುಖ್ಯ. ಪರಿಸರ ಸ್ವಚ್ಛವಾಗಿಟ್ಟುಕೊಂಡಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ಆರೋಗ್ಯವಿರದ ಸಂಪತ್ತಿಗೆ ಯಾವುದೇ ಕಿಮ್ಮತ್ತಿರುವುದಿಲ್ಲ.

ಈ ನಿಟ್ಟಿನಲ್ಲಿ ಸ್ವ ಇಚ್ಛಾಶಕ್ತಿಯಿಂದ ಆರೋಗ್ಯಕರ ಸಮಾಜ ನಿರ್ಮಾಣದ ಜವಾಬ್ದಾರಿ ಅರಿತು ಡೆಂಘೀ ಮುಕ್ತ ತುಮಕೂರು ಮಾಡಲು ಸಹಕರಿಸಬೇಕು ಎಂದು ಕರೆ ನೀಡಿದರು. ತುಮಕೂರು ನಗರವನ್ನು ಸೊಳ್ಳೆ ಮುಕ್ತ ಹಾಗೂ ಡೆಂಘೀ ಮುಕ್ತ ವನ್ನಾಗಿಸಲು ಪಾಲಿಕೆ ದಿಟ್ಟ ಹೆಜ್ಜೆ ಇಟ್ಟಿದ್ದು, ನಾಗರಿಕರು ಅಧಿಕಾರಿಗಳೊಂದಿಗೆ ಸಹಕರಿಸ ಬೇಕೆಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್‌ ಮನವಿ ಮಾಡಿದರು.

Advertisement

ಎಚ್ಚರ ಅಗತ್ಯ: ನೀರಿನ ಶೇಖರಣೆ ಹಾಗೂ ಘನತ್ಯಾಜ್ಯ ವಸ್ತುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೀ ಹರಡುತ್ತದೆ. ಪಟ್ಟಣಕ್ಕೆ ಸೀಮಿತವಾಗಿದ್ದ ಈ ಜ್ವರ ಗ್ರಾಮಾಂತರ ಪ್ರದೇಶಗಳಲ್ಲಿಯೂ ಕಂಡು ಬರುತ್ತಿರು ವುದು ಆತಂಕಕಾರಿ. ಸಂಜೆ ಮನೆಯ ಕಿಟಕಿ-ಬಾಗಿಲು ಮುಚ್ಚುವುದರಿಂದ ಸೊಳ್ಳೆಗಳು ಮನೆಯೊಳಗೆ ಪ್ರವೇಶಿ ಸುವುದಿಲ್ಲ. ನಾಗರಿಕರು ಎಚ್ಚರಿಕೆಯಿಂದ ಇರಬೇಕೆಂದು ಸಲಹೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರ ಣಾಧಿಕಾರಿ ಡಾ.ಟಿ.ಎನ್‌.ಪುರುಷೋತ್ತಮ್‌ ಮಾತ ನಾಡಿ, ಜಿಲ್ಲೆಯಲ್ಲಿ 2019ರ ಜನವರಿಯಿಂದ ಈವರೆಗೂ ತುಮಕೂರು ತಾಲೂಕು-14, ಕೊರಟಗೆರೆ-5, ಪಾವಗಡ-2, ಗುಬ್ಬಿ-2, ತಿಪಟೂರು-4, ಇತರೆ ಜಿಲ್ಲೆಯ 3 ಪ್ರಕರಣ ಸೇರಿದಂತೆ 30 ಡೆಂಘೀ ಪ್ರಕರಣಗಳು ವರದಿಯಾಗಿವೆ. ಇದರ ನಿಯಂತ್ರಣಕ್ಕೆ ಇಲಾಖೆಯಿಂದ ಲಾರ್ವಾ ಸಮೀಕ್ಷೆ ಹಾಗೂ ಇತರೆ ಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಂಪನ್ಮೂಲ ರಕ್ಷಣೆ ಅಗತ್ಯ: ಮಾಲಿನ್ಯದಿಂದ ನೈಸರ್ಗಿಕ ಸಂಪನ್ಮೂಲಗಳು ನಾಶವಾಗಿ ಸಾಂಕ್ರಾಮಿಕ ರೋಗ ಉಂಟು ಮಾಡುವ ಜೀವಿಗಳು ರೂಪಾಂತರ ವಾಗಿ ಹೊಸ ಪ್ರಬೇಧಗಳು ಉಗಮವಾಗಿ ಕೋಳಿಜ್ವರ, ಹಂದಿಜ್ವರ, ಹಕ್ಕಿಜ್ವರ, ನಿಫಾ, ಮತ್ತಿತರ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ.

ಈ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿಯಿಂದ ನಾವೆಲ್ಲ ನೈಸರ್ಗಿಕ ಸಂಪನ್ಮೂಲ ರಕ್ಷಿಸುವ ಮೂಲಕ ಸಾಂಕ್ರಾಮಿಕ ರೋಗ ನಿಯಂತ್ರಿಸಬಹುದು ಎಂದು ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ. ಬಿ.ಆರ್‌.ಚಂದ್ರಿಕಾ, ಆರೋಗ್ಯಾಧಿಕಾರಿ ಡಾ. ಟಿ. ನಾಗೇಶ್‌ಕುಮಾರ್‌, ಜಿಲ್ಲಾ ಸರ್ವೆಲೆನ್ಸ್‌ ಅಧಿಕಾರಿ ಡಾ. ಮೋಹನ್‌ದಾಸ್‌ ಆರ್‌.ವಿ., ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ. ಎಂ. ರಜನಿ, ಆಯುಷ್‌ ಅಧಿಕಾರಿ ಡಾ. ಸಂಜೀವ್‌ ಮೂರ್ತಿ, ನರ್ಸಿಂಗ್‌ ಶಾಲೆ ವಿದ್ಯಾರ್ಥಿಗಳು, ಆಶಾ ಕಾರ್ಯ ಕರ್ತೆಯರು, ಎಎನ್‌ಎಂಗಳು, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next