Advertisement

ಥ್ರಿಲ್ಲರ್‌ ಮೋಕ್ಷದಲ್ಲಿ ಮಾಸ್ಕ್ ಮ್ಯಾನ್ ಆಟ

05:48 AM Mar 18, 2019 | |

ಕನ್ನಡದಲ್ಲಿ ಈಗಾಗಲೇ ಹಲವು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ “ಮೋಕ್ಷ’ ಎಂಬ ಸಿನಿಮಾ ಕೂಡ ಬರುತ್ತಿದೆ. ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದೆ. ಈ ಚಿತ್ರದ ಮೂಲಕ ಸಮರ್ಥ್ ನಾಯ್ಕ ನಿರ್ದೇಶಕರಾಗಿದ್ದಾರೆ. ಅಷ್ಟೇ ಅಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

Advertisement

ಸಮರ್ಥ್ ಇದಕ್ಕೂ ಮುನ್ನ ಸಾಫ್ಟ್ವೇರ್‌ ಕಂಪೆನಿಯಲ್ಲಿ ಕೆಲಸ ಮಾಡಿದವರು. ಎಂಜಿನಿಯರಿಂಗ್‌, ಎಂಬಿಎ ಮಾಡಿರುವ ಅವರು ಡೆಲ್‌ ಸೇರಿದಂತೆ ಇತರೆ ಕಂಪೆನಿಗಳಲ್ಲಿ ಐದು ವರ್ಷ ಕೆಲಸ ಮಾಡುತ್ತಲೇ, ಸಿನಿಮಾ ಆಸಕ್ತಿ ಇಟ್ಟುಕೊಂಡವರು. ಕೆಲಸದಲ್ಲಿರುವಾಗಲೇ ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದರು. ಆದರೆ, ನಿರ್ಮಾಪಕರು ಸಿಗುವುದು ಕಷ್ಟ ಅಂದೆನಿಸಿ, ಕೊನೆಗೆ ತಮ್ಮ ಕೆಲಸಕ್ಕೆ ಗುಡ್‌ ಬೈ ಹೇಳಿ, ಅವರೇ ನಿರ್ಮಾಣಕ್ಕೆ ಮುಂದಾದರು.

ಅದಕ್ಕೂ ಮುನ್ನ ಅವರೇ ಸ್ವಂತದ್ದೊಂದು ಆ್ಯಡ್‌ ಏಜೆನ್ಸಿ ಶುರು ಮಾಡಿ, ಅಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರ್ಪೋರೇಟ್‌ ಜಾಹಿರಾತುಗಳನ್ನು ನಿರ್ದೇಶನ ಮಾಡಿದ ಅನುಭವ ಪಡೆದಿದ್ದಾರೆ. ಆ ಅನುಭವದ ಮೇಲೆ “ಮೋಕ್ಷ’ ಚಿತ್ರ ಮಾಡಿದ್ದಾರೆ. ಅವರೇ ಹೇಳುವಂತೆ, ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ಹಾಗಂತ ರೆಗ್ಯುಲರ್‌ ಮರ್ಡರ್‌ ಮಿಸ್ಟ್ರಿ ಇಲ್ಲಿಲ್ಲ. ನಾರ್ಮಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ ಕೂಡ ಅಲ್ಲ.

ಬಾಲಿವುಡ್‌ನ‌ಲ್ಲಿ ಬಂದ “ಬಾಜಿಗಾರ್‌’, “ರೇಸ್‌’ ಚಿತ್ರಗಳ  ಕೆಟಗರಿಗೆ ಸೇರುವ ಚಿತ್ರ ಇದಾಗಿದ್ದು, ಕನ್ನಡಿಗರಿಗೆ ಹೊಸತನ ಚಿತ್ರ ಕೊಡುವ ಪ್ರಯತ್ನ ಮಾಡಲಾಗಿದೆ ಎನ್ನುವ ನಿರ್ದೇಶಕರು, ಇಲ್ಲಿ ಮಾಸ್ಕ್ಮ್ಯಾನ್‌ ಒಬ್ಬನ ವಿಚಿತ್ರ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಒಬ್ಬ ಮಾಸ್ಕ್ ಮ್ಯಾನ್‌ ಚಿತ್ರದ ಹೈಲೈಟ್‌. ಜೊತೆಗೊಂದು ಲವ್‌ಸ್ಟೋರಿ ಸಹ ಚಿತ್ರದ ಜೀವಾಳ.

ಇಲ್ಲಿ ಮಾಸ್ಕ್ಮ್ಯಾನ್‌ ಮೂಡಿಸುವ ಅಚ್ಚರಿಗಳು, ಊಹಿಸಲಾಗದಂತೆ ಕೊಡುವ ಟ್ವಿಸ್ಟ್‌ಗಳು, ಬರುವ ಪ್ರತಿ ಪಾತ್ರದ ಭಾವನೆಗಳ ತೊಳಲಾಟ, ಹುಚ್ಚು ಪ್ರೀತಿ, ದ್ವೇಷ, ಅಸೂಯೆ, ಒಂಟಿತನ, ಹತಾಶೆ ಮತ್ತು ಸಂಬಂಧಗಳ ಘರ್ಷಣೆ ಇತ್ಯಾದಿ ವಿಷಯಗಳು ಅಡಕವಾಗಿವೆ’ ಎನ್ನುತ್ತಾರೆ ಸಮರ್ಥ್. ಚಿತ್ರಕ್ಕೆ ಮೋಹನ್‌ ಧನ್‌ರಾಜ್‌ ನಾಯಕರಾಗಿದ್ದಾರೆ. ಬಾಲಿವುಡ್‌ನ‌ ಐದಾರು ಚಿತ್ರಗಳಲ್ಲಿ ನಟಿಸಿರುವ ಮೋಹನ್‌ ಧನ್‌ರಾಜ್‌ ಮೂಲತಃ ಕನ್ನಡಿಗ.

Advertisement

ಎಂಬಿಎ ಓದಿ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದವರು ಬಾಲಿವುಡ್‌ಗೆ ಬಂದು, ಅಲ್ಲಿಂದ ಈಗ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ಇನ್ನು, ಆರಾಧ್ಯ ಲಕ್ಷ್ಮಣ್‌ ನಾಯಕಿ. ಇವರಿಗೆ ಇದು ಮೊದಲ ಚಿತ್ರ. ಮಾಡೆಲ್‌ ಆಗಿರುವ ಆರಾಧ್ಯ ಹಲವು ಕಮರ್ಷಿಯಲ್‌ ಆ್ಯಡ್‌ನ‌ಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 70 ದಿನಗಳ ಕಾಲ ಬೆಂಗಳೂರು, ಹಾಸನ, ಕಾರವಾರ, ಗೋಕಾಕ್‌, ಗೋವಾ ಸಮೀಪದ ಹಲವು ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಚಿತ್ರಕ್ಕೆ ಗುರುಪ್ರಶಾಂತ್‌ ರೈ, ಹಾಲಿವುಡ್‌ನ‌ ಜೋಮ್‌ ಜೋಸೆಫ್, ಕಿರಣ್‌ ಹಂಪಾಪುರ ಛಾಯಾಗ್ರಹಣ ಮಾಡಿದರೆ, ಕಿಶನ್‌ ಮೋಹನ್‌ ಹಾಗೂ ಸಚಿನ್‌ ಬಾಲು ಸಂಗೀತವಿದೆ. ಇಬ್ಬರು ಒಂದೊಂದು ಹಾಡು ಮಾಡಿದ್ದಾರೆ. ಜಯಂತ್‌ ಕಾಯ್ಕಿಣಿ ಹಾಗು ಕುಮಾರ್‌ ದತ್‌ ಸಾಹಿತ್ಯವಿದೆ.  ದೀಪಕ್‌ ದೊಡ್ಡೇರ, ಅನುರಾಧ ಭಟ್‌ ಹಾಡಿದ್ದಾರೆ. ಇಷ್ಟರಲ್ಲೇ ಪ್ರೇಕ್ಷಕರ ಮುಂದೆ “ಮೋಕ್ಷ’ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next