Advertisement

ತಾಪಂ ಕಟ್ಟಡದ ದುಸ್ಥಿತಿ ಅಪಾಯಕ್ಕೆ ಹೊಣೆ ಯಾರು?

05:17 PM Oct 13, 2019 | Team Udayavani |

ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿರುವ ತಾಪಂ ಕಟ್ಟಡದ ಒಂದು ಭಾಗ ಕುಸಿತದ ಅಂಚಿನಲ್ಲಿ ಅಪಾಯದ ಸ್ಥಿತಿ ತಲುಪಿದೆ. ಪ್ರತಿನಿತ್ಯ ಇದೇ ಜಾಗದಲ್ಲಿ ಓಡಾಡುವ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಜನಸಾಮಾನ್ಯರು ಅವಘಡಕ್ಕೆ ತುತ್ತಾದರೆ ಹೊಣೆ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿ ಬಂದಿದೆ.

Advertisement

ತಾಪಂ ಕಟ್ಟಡದ ಆರಂಭದಲ್ಲಿ ಕ್ಷೇತ್ರದ ಶಾಸಕರ ಕಚೇರಿ ಇದೆ. ಪಕ್ಕದಲ್ಲಿ ತಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಕೊಠಡಿ ಇದ್ದು, ಆ ಕಾರಿಡಾರ್‌ನಿಂದಲೇ ತಾಪಂ ಸಭಾಂಗಣಕ್ಕೆ ಹೋಗುವ ಜಾಗ ಕುಸಿತದ ದುಸ್ಥಿಯಲ್ಲಿದೆ. ಈ ಸಂಬಂಧ ಸಾರ್ವಜನಿಕರು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ.

ಯಾವುದೇ ಕ್ಷಣದಲ್ಲಿ ತಾಪಂ ಕಟ್ಟಡದ ಒಂದು ಭಾಗ ಕುಸಿಯಬಾರದೆಂದು ಅಡಕೆ ಮರದ ತುಂಡುಗಳನ್ನು ನಿಲ್ಲಿಸಿದ್ದಾರೆ.
ಈ ಅವ್ಯವಸ್ಥೆಯ ನಡುವೆಯೂ ಈ ಜಾಗದ ಪಕ್ಕದ ತಾಪಂ ಸಭಾಂಗಣದಲ್ಲಿ ಸೋಮವಾರ ಶಿವಮೊಗ್ಗ ಲೋಕಾಯುಕ್ತದವರಿಂದ ಸಾರ್ವಜನಿಕರ ಕುಂದು ಕೊರತೆಗಳ ಸಭೆ ಏರ್ಪಡಿಸಲಾಗಿತ್ತು.  ಈ ಸಂದರ್ಭದಲ್ಲಿ ಸಭೆಗೆ ಹೋಗುವ ಮುನ್ನ ಲೋಕಾಯುಕ್ತರು ಈ ದುಸ್ಥಿಯನ್ನು ಕಂಡು ಬೆಚ್ಚಿ ಬಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next