Advertisement
ಗಾಯಾಳುವನ್ನು ಅಬ್ದುಲ್ ರಜೀದ್ ಎಂದು ಗುರುತಿಸಲಾಗಿದೆ. ಖಾಸಗಿ ಶಾಲೆಯ ಬಸ್ವೊಂದು ಟಯರ್ ಪ್ಯಾಚ್ ಹಾಕಲು ಬಂದಿದ್ದು, ಟಯರನ್ನು ಬಸ್ಸಿನಿಂದ ಕೆಳಗಿಳಿಸಿ ಗಾಳಿ ತುಂಬುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಟಯರ್ ಸ್ಫೋಟಗೊಂಡ ಬಳಿಕ ಅದರ ತೀವ್ರತೆಗೆ ಟಯರ್ ಡ್ರಮ್ ಬಸ್ಸಿನ ಮೇಲ್ಛಾವಣಿಯ ಮೇಲಕ್ಕೆ ಬಿದ್ದು ನೆಲಕ್ಕುರುಳಿತು. ಈ ಘಟನೆ ಕಳೆದ ಶನಿವಾರದಂದು ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಗಾಳಿ ತುಂಬುವ, ಸ್ಫೋಟಗೊಳ್ಳುವ ಚಿತ್ರಣ ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಈ ವೇಳೆ ಟಯರ್ ಡ್ರಮ್ ಮೇಲಕ್ಕೆ ಚಿಮ್ಮುವ ಹಾಗೂ ಗಾಳಿ ತುಂಬುತ್ತಿದ್ದ ಯುವಕ ಮೇಲಕ್ಕೆ ಹಾರಿ ಕೆಳಕ್ಕೆ ಬೀಳುವ ಚಿತ್ರಣ ದೃಶ್ಯದಲ್ಲಿದೆ.
ಟಯರ್ ದುರ್ಬಲ ಆಗಿರುವುದರಿಂದ
ಟಯರ್ ಒಳಗೆ ಗುಳ್ಳೆ ಬಂದಿರುವುದರಿಂದ
ಟಯರ್ ಸಾಮರ್ಥ್ಯ ಇಲ್ಲದೆ ಇರುವುದರಿಂದ
ಗಾಳಿ ತುಂಬಿಸುವ ಗೇಜ್ನಲ್ಲಿ ದೋಷ ಇರುವುದರಿಂದ