Advertisement

Custody; ತಪ್ಪಿಸಿಕೊಳ್ಳಲು ಯತ್ನ: ಪೊಲೀಸ್ ಗುಂಡಿನ ದಾಳಿಯಲ್ಲಿ ಮೂವರಿಗೆ ಗಾಯ

04:20 PM Dec 24, 2023 | Team Udayavani |

ತಿನ್ಸುಕಿಯಾ(ಅಸ್ಸಾಂ): ಬಂಧನಕ್ಕೊಳಗಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರು ಯುವಕರ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.

Advertisement

ನಿಷೇಧಿತ ಉಲ್ಫಾ (ಐ) ಗೆ ಸೇರಲು ಮುಂದಾಗಿದ್ದ ಯುವಕರನ್ನು ಪೊಲೀಸರು ಬಂಧಿಸಿದ್ದು, ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಮೂವರನ್ನು ತಿನ್ಸುಕಿಯಾದ ಆಡಳಿತ ವ್ಯಾಪ್ತಿಯ ಪೊಲೀಸ್ ಜಿಲ್ಲೆಯಾಗಿರುವ ಸಾದಿಯಾಗೆ ಕರೆತರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಯುವಕರು ಜಿಲ್ಲೆಯ ಚಾಪಖುವಾ ಪ್ರದೇಶದವರಾಗಿದ್ದು, ನಿಷೇಧಿತ ಉಗ್ರ ಸಂಘಟನೆಗೆ ಸೇರಲು ಮುಂದಾಗಿದ್ದರು ಎಂದು ಅವರ ಕುಟುಂಬಗಳು ಸಾದಿಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೃಣಾಲ್ ದೇಕಾ ಪಿಟಿಐಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next