ಕಲ್ಕತ್ತಾ ಹೈಕೋರ್ಟ್‌ನಲ್ಲಿ ಹಿರಿಯ ನ್ಯಾಯಮೂರ್ತಿಯಾಗಿದ್ದ ಇಂದಿರಾ ಬ್ಯಾನರ್ಜಿ 2017ರ ಮಾ.5ರಂದು ಮದ್ರಾಸ್ ಹೈಕೋರ್ಟ್‌ಗೆ ಮುಖ್ಯ ನ್ಯಾಯ ಮೂರ್ತಿಯಾಗಿ ನೇಮಕಗೊಂಡಿದ್ದರು. ಮುಂದಿನ ತಿಂಗಳು ಅವರು 61ನೇ ವರ್ಷಕ್ಕೆ ಕಾಲಿರಿಸಲಿದ್ದಾರೆ. ಜತೆಗೆ ಅವರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ನ್ಯಾಯವಾದಿಯಾಗಿದ್ದ ಬ್ಯಾನರ್ಜಿ ಅವರನ್ನು ಕಲ್ಕತ್ತಾ ಹೈಕೋರ್ಟ್‌ಗೆ 2002ರ ಫೆ. 5ರಂದು ನ್ಯಾಯಮೂರ್ತಿ ಯನ್ನಾಗಿ ನೇಮಿಸಲಾಗಿತ್ತು. ನ್ಯಾ| ಬ್ಯಾನರ್ಜಿ ಅವರು ಸುಪ್ರೀಂಕೋರ್ಟ್‌ನ ಎಂಟನೇ ಮಹಿಳಾ ನ್ಯಾಯ ಮೂರ್ತಿ ಯಾಗಿದ್ದಾರೆ. ಈ ಹಿಂದೆ ನ್ಯಾ|
ಫಾತಿಮಾ ಬೀವಿ, ನ್ಯಾ.ಸುಜಾತಾ ವಿ.ಮನೋಹರ್, ನ್ಯಾ.ರುಮಾ ಪಾಲ್, ನ್ಯಾ| ಜ್ಞಾನ ಸುಧಾ ಮಿಶ್ರಾ, ನ್ಯಾ| ರಂಜನಾ ಪ್ರಕಾಶ್ ದೇಸಾಯಿ ಸುಪ್ರೀಂಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದರು.
Advertisement
ಜಮ್ಮು-ಕಾಶ್ಮೀರಕ್ಕೆ ಮೊದಲ ಮಹಿಳಾ ಸಿಜೆ
ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನ್ಯಾ.ಗೀತಾ ಮಿತ್ತಲ್ ಅವರನ್ನು ನೇಮಿಸಲಾಗಿದೆ. ಇದೇ ಮೊದಲ ಬಾರಿಗೆ ಕಣಿವೆ ರಾಜ್ಯದ ಹೈಕೋರ್ಟ್‌ಗೆ ಮಹಿಳೆಯೊಬ್ಬರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ. ಸದ್ಯ ಅವರು ದಿಲ್ಲಿ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ಸಿಂಧೂ ಶರ್ಮಾ ಅವರನ್ನು ಜಮ್ಮು ಮತ್ತು ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಿಸ ಲಾಗಿತ್ತು. ಇದರ ಜತೆಗೆ ಇನ್ನೂ ಹಲವು ಹೈಕೋರ್ಟ್‌ಗಳಿಗೆ ನೇಮಕ ಮಾಡಲಾಗಿದೆ. ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಕಲ್ಪೇಶ್ ಸತ್ಯೇಂದ್ರ ಝವೇರಿ ಅವರನ್ನು ಒಡಿಶಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿದೆ. ಬಾಂಬೆ ಹೈಕೋರ್ಟಿನ ನ್ಯಾ| ವಿಜಯ ಕೆ. ತಹಿಲ್‌ರಮಣಿ ಅವರನ್ನು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ, ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ನ್ಯಾ.ಎಂ.ಕೆ.ಶಾ ಅವರನ್ನು ನೇಮಿಸಲಾಗಿದೆ