Advertisement

ನನಗೆ ಮೂರು ಬಾರಿ ತಪ್ಪಿತು ಸಿಎಂ ಪಟ್ಟ

12:30 AM Feb 25, 2019 | Team Udayavani |

ದಾವಣಗೆರೆ : ಈ  ಹಿಂದೆ ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಸಿಗದಂತಾಯಿತು. ಸಿಎಂ ಸ್ಥಾನದಿಂದ ವಂಚಿತನಾದ ನನಗೆ ಬೇಕೋ, ಬೇಡವೋ ಎಂಬಂತೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು’ ಎಂದು ಉಪ ಮುಖ್ಯಮಂತ್ರಿ ಡಾ|ಜಿ. ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಭಾನುವಾರ ನಡೆದ ಛಲವಾದಿ ಮಹಾಸಭಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

“ಅವಕಾಶ ಸಿಕ್ಕಾಗಲೆಲ್ಲಾ ಛಲವಾದಿ ಸಮಾಜದವರು ತುಳಿತಕ್ಕೆ ಒಳಗಾಗಿದ್ದಾರೆ. ನಾನೂ ಸೇರಿ ಈ ಹಿಂದೆ ಹಲವು ಮುಖಂಡರು ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾಗಿದ್ದೇವೆ. ಈ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಹತ್ತಿರವಿದ್ದ ಬಿ.ಬಸವಲಿಂಗಪ್ಪ, ಕೆ.ಎಚ್‌.ರಂಗನಾಥ್‌ ಆ ಸ್ಥಾನದಿಂದ ವಂಚಿತರಾದರು. ನಂತರ ಮಲ್ಲಿಕಾರ್ಜುನ್‌ ಖರ್ಗೆಯವರಿಗೂ ಸಿಎಂ ಸ್ಥಾನ ತಪ್ಪಿಸಲಾಯಿತು. ಜತೆಗೆ, ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ಸಿಗದಂತಾಯಿತು.

ಮುಖ್ಯಮಂತ್ರಿ ಸ್ಥಾನದಿಂದ ವಂಚಿತನಾದ ನನಗೆ ಬೇಕೋ, ಬೇಡವೋ ಎಂಬಂತೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ನಿಮ್ಮ ಸಂಘಟನೆಯೇ ನನಗೆ ಶಕ್ತಿ ತುಂಬಬೇಕಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next