Advertisement

ಎಟಿಎಂ ಕಳವಿಗೆ ಯತ್ನ ಪ್ರಕರಣ ತನಿಖೆಗೆ ಮೂರು ತಂಡ ರಚನೆ

11:07 PM Aug 05, 2023 | Team Udayavani |

ಮಂಗಳೂರು: ಸುರತ್ಕಲ್‌ನಲ್ಲಿ ಸೌತ್‌ ಇಂಡಿಯನ್‌ ಬ್ಯಾಂಕ್‌ನ ಎಟಿಎಂ ಅನ್ನು ಜೆಸಿಬಿ ಬಳಸಿ ಕಳವಿಗೆ ಯತ್ನಿಸಿದ ತನಿಖೆಗೆ ಮೂರು ತಂಡವನ್ನು ರಚಿಸಲಾಗಿದೆ. ಕೆಲವು ಮಾಹಿತಿಗಳು ಲಭಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವ ವಿಶ್ವಾಸವಿದೆ ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

Advertisement

ಮೊದಲ ಪ್ರಕರಣ
ಜೆಸಿಬಿ ಬಳಸಿಕೊಂಡು ಎಟಿಎಂ ಯಂತ್ರವನ್ನೇ ಕದ್ದೊಯ್ಯಲು ಯತ್ನಿಸಿರುವುದು ಕರಾವಳಿ ಭಾಗದಲ್ಲಿ ಮೊದಲ ಪ್ರಕರಣ. ಹಾಗಾಗಿ ಇದರ ಹಿಂದೆ ಬೇರೆ ಜಿಲ್ಲೆ ಅಥವಾ ರಾಜ್ಯದ ಕಳ್ಳರು ಭಾಗಿಯಾಗಿರಬಹುದೇ ಎಂಬ ಸಂಶಯವೂ ಪೊಲೀಸರಿಗಿದೆ. ಎಟಿಎಂ ಯಂತ್ರವನ್ನು ತೆಗೆಯುವುದಕ್ಕಾಗಿಯೇ ಕಳ್ಳರು ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಕಳವು ಮಾಡಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next