Advertisement

ಎತ್ತುಗಳ ಕಳ್ಳತನ ಪ್ರಕರಣ: ಮೂವರ ಬಂಧನ

01:11 PM Dec 06, 2021 | Team Udayavani |

ಆಳಂದ: ಕಲಬುರಗಿ ಮತ್ತು ಬೀದರ್‌ ಜಿಲ್ಲೆಯಲ್ಲಿ ನಡೆದ ಎತ್ತುಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ನರೋಣಾ ಪೊಲೀಸರು, 85 ಸಾವಿರ ರೂ. ಮೌಲ್ಯದ ಎರಡು ಎತ್ತು, 5 ಲಕ್ಷ ರೂ. ಮೌಲ್ಯದ ಒಂದು ಮಹಿಂದ್ರಾ ಬುಲೆರೋ ಪಿಕಪ್‌ ಗೂಡ್ಸ್‌ ವಾಹನ ಮತ್ತು 20 ಸಾವಿರ ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆ.

Advertisement

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿದ್ಧಾಪುರದ ಭಾಷಾ ಸುಲೇಮಾನಸಾಬ್‌ ಖಟಕರ್‌ (29), ಬಳ್ಳಾರಿ ಜಿಲ್ಲೆಯ ಕೊಡಗಲ್‌ ಗ್ರಾಮದ ಭಾಷಾ ಹುಸೇನಸಾಬ ಸಯ್ಯದ್‌ (29), ರಾಯಚೂರು ಜಿಲ್ಲೆ ಸಿಂಧನೂರಿನ ಮೊಹ್ಮದ್‌ ರಫೀಕ್‌ ಹುಸೇನಸಾಬ ಪಠಾಣ (28) ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಹೆಚ್ಚವರಿ ಮತ್ತು ಆಳಂದ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಮಂಜುನಾಥ ಮಾರ್ಗದರ್ಶನದಲ್ಲಿ ನರೋಣಾ ಪೊಲೀಸ್‌ ಠಾಣೆಯ ಪಿಎಸ್‌ಐ ವಾತ್ಸಲ್ಯ, ಪಿಎಸ್‌ಐ ಸೈಯದ್‌ ಮಹಿಬೂಬ ನೇತೃತ್ವದಲ್ಲಿ ಸಿಬ್ಬಂದಿಗಳಾದ ಭಗವಂತರಾಯ, ಶಾಂತಕುಮಾರ, ಈರಣ್ಣಾ, ರೇವಣಸಿದ್ಧಪ್ಪ, ಸತೀಶ್ಚಂದ್ರ, ಸತೀಶ, ಶರಣು, ಪ್ರದೀಪ, ಎಸ್‌ಜಿಪಿಎಲ್‌ಸಿಯಾದ ಶ್ರೀಶೈಲ ಎಂ. ಚಿಂಚೋಳಿ ದಾಳಿ ನಡೆಸಿ, ತಾಲೂಕಿನ ಬೋಳಣಿ ಕ್ರಾಸ್‌ ಹತ್ತಿರ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next