Advertisement

ಮೂವರು ಐಸಿಸ್‌ ಬೆಂಬಲಿಗರ ಬಂಧನ

01:38 AM Jun 16, 2019 | sudhir |

ಕೊಯಮತ್ತೂರು: ಕೆಲವೇ ದಿನಗಳ ಹಿಂದೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಷ್ಟ್ರೀಯ ತನಿಖಾದಳ (ಎನ್‌ಐಎ) ನಡೆಸಿದ ಶೋಧಕಾರ್ಯದ ವೇಳೆ ವಶಕ್ಕೆ ಪಡೆದಿದ್ದ ಮೂವರು ಐಸಿಸ್‌ ಬೆಂಬಲಿಗರನ್ನು ಶನಿವಾರ ಬಂಧಿಸಲಾಗಿದೆ.

Advertisement

ಜೂ.13ರಂದು ಮೊಹಮ್ಮದ್‌ ಹುಸೇನ್‌, ಶಹ ಜಹಾನ್‌, ಶೇಖ್‌ ಶಫೀಉಲ್ಲಾ ಮನೆ ಸಹಿತ ಒಟ್ಟು 7 ಕಡೆಗಳಲ್ಲಿ ಶೋಧ ನಡೆಸಲಾಗಿತ್ತು. ಇವರುಐಸಿಸ್‌ ಪರ ಪ್ರಚಾರ ನಡೆಸು ತ್ತಿರುವ ಕುರಿತು ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಶ್ರೀಲಂಕಾದಲ್ಲಿ ಈಸ್ಟರ್‌ ಹಬ್ಬದಂದು ಸ್ಫೋಟ ನಡೆಸಿದ ಝಹ್ರನ್‌ ಹಶೀಂ ಜತೆಗೆ ಫೇಸ್‌ಬುಕ್‌ನಲ್ಲಿ ಸ್ನೇಹಿತನಾಗಿದ್ದ ಮೊಹಮ್ಮದ್‌ ಅಜರುದ್ದೀನ್‌ನನ್ನು ಕೂಡ ಅದೇ ದಿನ ಎನ್‌ಐಎ ಬಂಧಿಸಿತ್ತು. ಈತನೇ ಐಸಿಸ್‌ನ ತಮಿಳುನಾಡು ವಿಭಾಗವನ್ನು ಹುಟ್ಟುಹಾಕಿದ್ದ ಎನ್ನಲಾಗಿದೆ.

ಅಜರುದ್ದೀನ್‌ ಜತೆಗೆ ಈ ಮೂವರೂ ಸಂಪರ್ಕ ಹೊಂದಿದ್ದರು. ಇವರು ಸೋಶಿಯಲ್ ಮೀಡಿಯಾಗಳ ಮೂಲಕ ಐಸಿಸ್‌ ಪರ ಪ್ರಚಾರ ನಡೆಸು ತ್ತಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ ಅಡಿಯಲ್ಲಿ ಬಂಧಿಸ ಲಾಗಿದೆ. ಇವರನ್ನು ಕೊಯ ಮತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂ.28ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next