ಸುಮಾರಿಗೆ ನಡೆದಿದೆ. ಗಂಗಾಪುರ ಬಡಾವಣೆಯ ರೇಶ್ಮಿ ಪ್ಯಾರಾ ಮೆಡಿಕಲ್ ಕಾಲೇಜು ಕಟ್ಟಡ ಸಂಪೂರ್ಣ ನೆಲಸಮಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾಲೇಜಿನ ಪ್ರಯೋಗಾಲಯದ ವಸ್ತುಗಳು, ಪೀಠೊಪಕರಣಗಳು, ದಾಖಲೆಗಳು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಜಖಂಗೊಂಡಿದ್ದು, ಸ್ಥಳಕ್ಕಾಗಮಿಸಿದ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಜೆಸಿಬಿ ಯಂತ್ರಗಳ ಮೂಲಕ ಕಟ್ಟಡ ತ್ಯಾಜ್ಯ ತೆರವಿಗೆ ಮುಂದಾಗಿದ್ದಾರೆ.
Advertisement
ಅಕ್ರಮ ಕಟ್ಟಡ: ಈ ಕಾಲೇಜು ಕಟ್ಟಡ ಲೇಔಟ್ ಮಾನ್ಯತೆ ಇಲ್ಲದ ಗುಂಟಾ ಪ್ಲಾಟ್ ಪ್ರದೇಶದಲ್ಲಿದ್ದು, ಕಟ್ಟಡ ನಿರ್ಮಾಣ ಪರವಾನಗಿ ಪಡೆಯದೆ ನಿರ್ಮಿಸಿದ ಅಕ್ರಮ ಕಟ್ಟಡ ಎಂದು ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ಬಳಿಕ ವಿವರಿಸಿದ್ದಾರೆ. ಅಲ್ಲದೇ ನಿಯಮ ಬಾಹಿರವಾಗಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಿದ್ದು, ಕಳಪೆ ಗುಣಮಟ್ಟದಿಂದ ಕಟ್ಟಡ ಕುಸಿದಿರುವ ಸಾಧ್ಯತೆ ಇದೆ. ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗುವುದು ಎಂದು ಆಯುಕ್ತ ಹರ್ಷ ಶೆಟ್ಟಿ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನವಷ್ಟೇ ನಗರದ ಹಲವೆಡೆ ಭೂಕಂಪನದ ಅನುಭವ ಆಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ನಸುಕಿನಲ್ಲಿ ಏಕಾಏಕಿ ಕಟ್ಟಡ ಕುಸಿದ ಶಬ್ದದಿಂದ ಭಯಭೀತರಾಗಿ ನಾವೆಲ್ಲ ಮನೆಯಿಂದ ಓಡಿ ಬಂದೆವು. ಆದರೆ ನೋಡುವಷ್ಟರಲ್ಲೇ ಮಹಾವಿದ್ಯಾಲಯದ ಮೂರಂತಸ್ತಿನ ಕಟ್ಟಡ ಸಂಪೂರ್ಣ ನೆಲಕ್ಕುರುಳಿತ್ತು. ದೇವರು ದೊಡ್ಡವನು, ಯಾರಿಗೂ ಹಾನಿಯಾಗಿಲ್ಲ ಎಂದು ಸ್ಥಳೀಯರು ವಿವರಿಸಿದರು.