Advertisement

ಮೂರು ಈಶಾನ್ಯ ರಾಜ್ಯಗಳ ಮತಎಣಿಕೆ ಆರಂಭ

08:26 AM Mar 03, 2018 | Harsha Rao |

ಹೊಸದಿಲ್ಲಿ: ಮೇಘಾಲಯ, ನಾಗಾಲ್ಯಾಂಡ್‌ ಮತ್ತು ತ್ರಿಪುರಾ ವಿಧಾನಸಭೆಗಳಿಗೆ ಫೆ.18, ಮತ್ತು 27ರಂದು ನಡೆದ ಮತಗಳ ಎಣಿಕೆ ಶನಿವಾರ ಆರಂಭಗೊಂಡಿದೆ. ಅದಕ್ಕಾಗಿ ಮೂರು ರಾಜ್ಯಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಲವು ಮತಗಟ್ಟೆ ಸಮೀಕ್ಷೆಗಳ ಫ‌ಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಮೂರೂ ರಾಜ್ಯಗಳಲ್ಲಿ ಪ್ರಮುಖ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿವೆ. ತ್ರಿಪುರಾದಲ್ಲಿ ಸಿಪಿಎಂ ನಾಯಕ ಮಾಣಿಕ್‌ ಸರ್ಕಾರ್‌ ನೇತೃತ್ವದ ಸರಕಾರ 1998ರಿಂದ ಅಧಿಕಾರದಲ್ಲಿದೆ. ನಾಗಾಲ್ಯಾಂಡ್‌ನ‌ಲ್ಲಿ ಎನ್‌ಪಿಎಫ್ ನೇತೃತ್ವದ ಸರಕಾರ 2003ರಿಂದ ಅಧಿಕಾರದಲ್ಲಿದೆ. ಮೇಘಾಲಯದಲ್ಲಿ ಮುಕುಲ್‌ ಸಂಗ್ಮಾ ನೇತೃತ್ವದ ಕಾಂಗ್ರೆಸ್‌ ಸರಕಾರ ಸದ್ಯ ಅಧಿಕಾರದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next