Advertisement

ಮೂರು ಅಕ್ಷರ ಹೇಳಲು ಮೂರು ಸೆಮ್ ಕಾದ!

01:57 PM Jan 30, 2018 | Team Udayavani |

ಈ ಪ್ರೀತಿ ಅಂದರೆ ಹಾಗೇ ಅಲ್ವಾ? ನಿಂತಲ್ಲಿ ನಿಲ್ಲಲು ಕೂತಲ್ಲಿ ಕೂರಲು ಆಗಲ್ಲ. ಅದರಲ್ಲೂ ಕಾಲೇಜು ದಿನಗಳ ಪ್ರೇಮಪ್ರಕರಣ ಅಂದಮೇಲೆ ಕೇಳಬೇಕೆ? ಪ್ರೀತಿಗೆ, ಪ್ರೇಮಕ್ಕೆ ಕಾಲೇಜಿನಲ್ಲಿ ಬರವಿಲ್ಲ. ಎಂಥ ಸನ್ಯಾಸಿಯಾದರೂ ಸರಿ, ಅವನೂ ಅಲ್ಲಿ ಪ್ರೀತಿಯ ಬಲೆಯಲ್ಲಿ ಬೀಳುತ್ತಾನೆ. ಬೇರೆ ಬೇರೆ ವಿಭಾಗಗಳ ತರಗತಿಗಳ ನಡುವೆ ಸಂಬಂಧಗಳು ಬೆಳೆಯಲು ಈ ಲವ್‌ ಒಂದು ಬ್ರಿಡ್ಜ್ ಥರಾ ಕೆಲಸ ಮಾಡುತ್ತೆ ಎನ್ನಬಹುದು. ಪಿಜಿ ಲೆವಲ…ಗೆ ಬಂದರೂ ಈ ಹುಡುಗರು ಮಾತ್ರ “ಐ ಲವ್‌ ಯು’ ಎನ್ನಲು ಇನ್ನೂ ನಾಚಿಕೆ ಪಡುತ್ತಾರೆ. ಹುಡುಗಿ ಎಲ್ಲಿ ತಮ್ಮ ಪ್ರೀತಿಯನ್ನು ತಿರಸ್ಕರಿಸುತ್ತಾಳ್ಳೋ ಎನ್ನುವ ಭಯವೋ ಅಥವಾ ಹೇಳಲು ನಾಚಿಕೆಯೋ ಗೊತ್ತಿಲ್ಲ. ಇಂಥ ಪ್ರೀತಿಯ ಮಾಯೆಯಲ್ಲಿ ನನ್ನ ಫ್ರೆಂಡ್‌ ಬಿದ್ದಿದ್ದ. ಬಿದ್ದವನು ಮೇಲೆ ಏಳಲೇ ಇಲ್ಲ. 

Advertisement

ಅವನ ಪರಿಸ್ಥಿತಿಯನ್ನು ಕಂಡ ನಮಗೆಲ್ಲಾ ನಗುವೋ ನಗು. ಅವನು ನನಗೆ ಹೊಸ ಪರಿಚಯ ಆದ್ದರಿಂದ ನನಗೆ ಕುತೂಹಲ. ಒಂದು ದಿನ ನಾನು ಕೇಳಿಯೇಬಿಟ್ಟೆ: “ಆರ್‌ ಯು ಇನ್‌ ಲವ್‌?’ ಎಂದು. ಆಗ ಅವನ ಕಣ್ಣಲಿ ನಾಚಿಕೆ, ಸಂಕೋಚ ಕಂಡು ನನಗೆ ಅಯ್ಯೋ ಪಾಪ ಎನ್ನಿಸಿತು . “ಈ ಲವ್‌ ಯಾವಾಗಿಂದ?’ ಎಂದು ಕೇಳಿದಾಗ “ಮೂರನೇ ಸೆಮಿಸ್ಟರ್‌ನಿಂದ’ ಅಂದ. ನನಗೆ ನಗು. ಪ್ರೀತಿಸುತ್ತಿರುವ, ಆರಾಧಿಸುತ್ತಿರುವ ಹುಡುಗಿಯ ಮುಂದೆ ನಿಂತು ಮೂರು ಪದ ಹೇಳಲು ಮೂರು ಸೆಮಿಸ್ಟರ್‌ ಕಾದಿದ್ದೀಯ ಅಂತ ಚೇಡಿಸಿದೆ. ಇಷ್ಟಾದರೂ, ಅವನು ಅವಳಿಗೆ ಐ ಲವ್‌ ಯು ಎಂದು ಮುಖತಃ ಹೇಳಲೇ ಅಲ್ಲ. ಅವನ ಸಂಕಟ ನೋಡಲಾಗದೆ ನನ್ನ ಸ್ನೇಹಿತರೇ ಅವನ ಪ್ರೇಮಸಂದೇಶವನ್ನು ಈಗ ಆ ಹುಡುಗಿಗೆ ತಲುಪಿಸಿದ್ದಾರೆ. ಅವಳ ಉತ್ತರಕ್ಕೆ ನನ್ನ ಸ್ನೇಹಿತ ಮಾತ್ರವಲ್ಲ, ನಾವೆಲ್ಲರೂ ಕಾದಿದ್ದೇವೆ. ಯಾವುದಕ್ಕೂ ಆಲ್‌ ದ ಬೆಸ್ಟ್ ಅವನಿಗೆ.

ಕಾವ್ಯ ಹೆಚ್‌.ಎನ್‌.

Advertisement

Udayavani is now on Telegram. Click here to join our channel and stay updated with the latest news.

Next