Advertisement

ಕಲಬುರಗಿ: ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಮೂವರ ಸಾವು

12:30 PM Sep 22, 2020 | keerthan |

ಕಲಬುರಗಿ: ಸೋಮವಾರ ಬೆಳಿಗ್ಗೆ 9.30 ಹಾಗೂ ರಾತ್ರಿ 9 ರ ಸುಮಾರಿಗೆ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Advertisement

ಮೃತ ಮೂವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಎರಡು ಅಪಘಾತಗಳು ನಗರ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿವೆ.

ಬುಲೆರೋ- ಬೈಕ್ ಢಿಕ್ಕಿ: ಇಬ್ಬರ ದುರ್ಮರಣ

ಕಲಬುರಗಿ ನಗರದ ಆಳಂದಕ್ಕೆ ಹೋಗುವ ಭೋಸಗಾ ಕ್ರಾಸ್ ದಿಂದ ಸ್ವಲ್ಪ ದೂರದಲ್ಲಿ ಬೈಕ್ ಗೆ ಬುಲೆರೋ ಪಿಕಪ್ ಢಿಕ್ಕಿ ಹೊಡೆದ ಅಪಘಾತದಲ್ಲಿ ಇಬ್ಬರು ದುರ್ಮಣಕ್ಕೀಡಾದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಆಳಂದ ತಾಲೂಕಿನ ಸಣ್ಣ ಗ್ರಾಮ ಕುಡಕಿ ಗ್ರಾಮದ ಮಾಳಪ್ಪ ಶನೈಸಿ (37) ಹಾಗೂ ಶರಣು ಗುಂಡಗುರ್ತಿ (28) ಎನ್ನುವರೇ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರಿ ವಿಭಾಗದ ಇನ್ಸ್ಪೆಕ್ಟರ್ ಶಾಂತಿನಾಥ ಮತ್ತಿತ್ತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಬಸ್ -ಬೈಕ್ ಅಪಘಾತ

ಸೋಮವಾರ ಬೆಳಿಗ್ಗೆ 9.30ರ ಸುಮಾರಿಗೆ  ಕಲಬುರಗಿ- ಜೇವರ್ಗಿ ನಡುವಿನ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ17 ವರ್ಷದ ಯುವಕ ಸಾವನ್ನಪ್ಪಿದ್ದಾನೆ.

ಸೋಮವಾರ ಬೆಳಿಗ್ಗೆ ಕಲಬುರಗಿ- ಜೇವರ್ಗಿ ರಸ್ತೆಯ ಸರಡಗಿ ಬಿ ಕ್ರಾಸ್ ಬಳಿ ನಡೆದ ಬಸ್- ಬೈಕ್ ನಡುವಿನ ಅಪಘಾತದಲ್ಲಿ ಕಲಬುರಗಿ ತಾಲೂಕಿನ ಅಂಕಲಗಾ ಬಿ ಗ್ರಾಮದ ಮಲ್ಲಿಕಾರ್ಜುನ ಅಖಂಡಪ್ಪ ದೊಡ್ಡಗೌಡ (17) ಸಾವನ್ನಪ್ಪಿದ ಯುವಕನಾಗಿದ್ದಾನೆ.

ಬಸ್ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಆಗಮಿಸುತ್ತಿತ್ತು. ಯುವಕ ಕವಲಗಾದಿಂದ ಅಜ್ಜಿಯ ಊರು ಸರಡಗಿಗೆ ಹೊರಟಿದ್ದ.

ಘಟನಾ ಸ್ಥಳಕ್ಕೆ ಹಿರಿಯ ಪೊಲಿಸ್ ಅಧಿಕಾರಿಗಳು ಹಾಗೂ ಸಂಚಾರಿ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next