Advertisement

ಮೂವರು ಪೊಲೀಸರಿಗೆ ಸೋಂಕು

02:16 PM Jul 05, 2020 | Suhan S |

ಬೆಳಗಾವಿ: ಮಹಾಮಾರಿ ಕೋವಿಡ್ ಗಡಿ ಜಿಲ್ಲೆ ಬೆಳಗಾವಿಯನ್ನು ಬೆಂಬಿಡದೇ ಕಾಡುತ್ತಿದ್ದು, ಕೆಲ ದಿನಗಳಿಂದ ಕೇವಲ ಕ್ವಾರಂಟೈನ್‌ನಲ್ಲಿದ್ದವರಿಗಷ್ಟೇ ತಗಲುತ್ತಿದ್ದ ಸೋಂಕು ಈಗ ಪೊಲೀಸರಿಗೂ ಕಾಡುತ್ತಿದೆ. ಮೂವರು ಪೊಲೀಸರಿಗೆ ಸೋಂಕು ತಗುಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಶನಿವಾರ ಒಟ್ಟು 27 ಹೊಸ ಪ್ರಕರಣಗಳು ಪತ್ತೆಯಾಗಿದೆ.

Advertisement

ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಡಿಆರ್‌ ಪೇದೆಗಳಿಗೆ ಸೋಂಕು ತಗುಲಿದೆ. ಕರ್ತವ್ಯ ಮುಗಿಸಿ ನಗರದ ಪೊಲೀಸ್‌ ವಸತಿ ಗೃಹದಲ್ಲಿದ್ದ ಈ ಮೂವರು ಪೇದೆಗಳಿಗೆ ಸೋಂಕು ತಗುಲಿದ್ದರಿಂದ ಆತಂಕ ಹೆಚ್ಚಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಪೇದೆಗೆ ಸೋಂಕು ತಗುಲಿತ್ತು. ಜತೆಗೆ ಕ್ಯಾಂಪ್‌ ಪೊಲೀಸರು ಬಂಧಿಸಿದ್ದ ಆರೋಪಿಗೂ ಸೋಂಕು ದೃಢವಾಗಿತ್ತು. ಕೋವಿಡ್ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಈ ಸೋಂಕು ಅಂಟಿದ್ದರಿಂದ ಜೀವ ಕೈಯಲ್ಲಿ ಹಿಡಿದು ಪೊಲೀಸರು ಕೆಲಸ ಮಾಡುವಂತಾಗಿದೆ.

ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್‌. ಗ್ರಾಮದ ಮೂರು ವರ್ಷದ ಹೆಣ್ಣು ಮಗು, ನೆಹರು ನಗರದ 31 ವರ್ಷದ ವ್ಯಕ್ತಿ, ಖಾನಾಪುರ ತಾಲೂಕಿನ ಕರವಿನಕೊಪ್ಪ ಗ್ರಾಮದ 30 ವರ್ಷದ ವ್ಯಕ್ತಿ, ಸುಭಾಷ ನಗರದ 27 ವರ್ಷದ ಯುವಕ, 26 ವರ್ಷದ ಯುವಕ, 27 ವರ್ಷದ ಯುವಕ, ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಮದ 14 ವರ್ಷದ ಬಾಲಕ, 35 ವರ್ಷದ ಮಹಿಳೆ, ಅಥಣಿ ತಾಲೂಕಿನ ಗುಂಡೇವಾಡಿ 61 ವರ್ಷದ ವ್ಯಕ್ತಿ, ಅನಂತಪುರದ 20 ವರ್ಷದ ಯುವತಿ, 18 ವರ್ಷದ ಯುವಕ, ಝಜಂಜರವಾಡದ 53 ವರ್ಷದ ವ್ಯಕ್ತಿ, ಚಿಕ್ಕಟ್ಟಿ ಗ್ರಾಮದ 20 ವರ್ಷದ ಯುವತಿ, ಸಂಕೋನಟ್ಟಿಯ38 ವರ್ಷದ ವ್ಯಕ್ತಿ, ಶೇಡಬಾಳದ 55 ವರ್ಷದ ಮಹಿಳೆ, 6 ವರ್ಷದ ಬಾಲಕ, 11 ವರ್ಷದ ಬಾಲಕಿ, 62 ವರ್ಷದ ವ್ಯಕ್ತಿ, 34 ವರ್ಷದ ವ್ಯಕ್ತಿ, ಬೆಳಗಾವಿ ನಗರದ 58 ವರ್ಷದ ಮಹಿಳೆ, ನಗರದ 75 ವರ್ಷದ ವೃದ್ಧ, ಕಡೋಲಿ ಗ್ರಾಮದ 63 ವರ್ಷದ ಮಹಿಳೆ, 36 ವರ್ಷದ ವ್ಯಕ್ತಿ, 27 ವರ್ಷದ ಮಹಿಳೆ, ಖಾಸಬಾಗ 52 ವರ್ಷದ ಮಹಿಳೆ ಹಾಗೂ ಅಥಣಿ 83 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.

Advertisement

Udayavani is now on Telegram. Click here to join our channel and stay updated with the latest news.

Next