Advertisement

3 ಸಚಿವರು ಪ್ರಮಾಣವಚನ ಸ್ವೀಕಾರ; ಭಿನ್ನಮತ ಸ್ಫೋಟ, ಪರಂ ಗೈರು

05:56 PM Sep 01, 2017 | Team Udayavani |

ಬೆಂಗಳೂರು: ಗುಂಡ್ಲುಪೇಟೆ ಶಾಸಕಿ ಗೀತಾಮಹದೇವ ಪ್ರಸಾದ್, ಎಚ್.ಎಂ.ರೇವಣ್ಣ ಹಾಗೂ ಆರ್ ಬಿ ತಿಮ್ಮಾಪುರ್ ಅವರು ಶುಕ್ರವಾರ ಸಂಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

Advertisement

ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ರಾಜ್ಯಖಾತೆ ಸಚಿವರಾಗಿ ಗೀತಾಮಹದೇವಪ್ರಸಾದ್ ಅವರು ಮಲೆಮಹದೇಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಎಚ್.ಎಂ.ರೇವಣ್ಣ ಹಾಗೂ ಆರ್ ಬಿ ತಿಮ್ಮಾಪುರ್ ದೇವರ ಹೆಸರಿನಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಿಎಂ ವಿರುದ್ಧ ಅಸಮಾಧಾನ ಪರಮೇಶ್ವರ್ ಗೈರು:

ತಮ್ಮ ಆಪ್ತ ಕೆ.ಷಡಕ್ಷರಿ ಪರ ಬಲವಾಗಿ ಬ್ಯಾಟಿಂಗ್ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿದ್ದಾರೆಂದು ಊಹಾಪೋಹ ಹರಿದಾಡತೊಡಗಿದೆ. ಅದಕ್ಕೆ ಪುರಾವೆ ಎಂಬಂತೆ ಷಡಕ್ಷರಿ ಬದಲು ಸಿಎಂ ಅವರು ಗೀತಾಮಹದೇವಪ್ರಸಾದ್ ಗೆ ಸಚಿವ ಸ್ಥಾನ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಪರಮೇಶ್ವರ್ ಅವರು ಇಂದಿನ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದಾರೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next