Advertisement

ತಾಲೂಕಿಗೆ ಮೂವರು ಸಂಸದರು! ಒಂದೇ ಪಕ್ಷ, ಒಂದೇ ಕ್ಷೇತ್ರದವರಿವರು

02:57 AM May 24, 2019 | Team Udayavani |

ಸುಳ್ಯ: ದಕ್ಷಿಣ ಕನ್ನಡ ಕ್ಷೇತ್ರದ ಏಕೈಕ ಮೀಸಲು ವಿಧಾನಸಭಾ ಕ್ಷೇತ್ರ ಸುಳ್ಯದಲ್ಲಿ ಮೂವರು ಸಂಸದರಿದ್ದಾರೆ.

Advertisement

ಈ ಮೂವರು ಒಂದೇ ಕ್ಷೇತ್ರದವರು ಮಾತ್ರವಲ್ಲ; ಒಂದೇ ಪಕ್ಷದವರು ಕೂಡ. ಓರ್ವರು ನಾಲ್ಕನೇ ಬಾರಿ, ಇನ್ನೋರ್ವರು ಮೂರನೇ, ಮತ್ತೋರ್ವರು ಎರಡನೇ ಬಾರಿಗೆ ಚುನಾಯಿತರಾಗಿದ್ದಾರೆ.

ಮೂವರು ಸಂಸದರು!
ಸುಳ್ಯ, ಕಡಬ ಮತ್ತು ಪುತ್ತೂರು ತಾಲೂಕಿನ ಕೆಲವು ಗ್ರಾಮಗಳನ್ನು ಹೊಂದಿರುವ ಸುಳ್ಯ ಪ.ಜಾತಿ -ಪಂಗಡಕ್ಕೆ ಮೀಸಲು ಕ್ಷೇತ್ರ. ಇಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಇತರ ವರ್ಗದವರು ಸ್ಪರ್ಧಿಸಲು ಸಾಧ್ಯವಿಲ್ಲ. ಹಾಗಂತ ಇಲ್ಲಿನವರು ಬೇರೆ ಕ್ಷೇತ್ರಗಳಲ್ಲಿ ಸಿಕ್ಕ ಅವಕಾಶ ಬಿಟ್ಟು ಕೊಟ್ಟಿಲ್ಲ. ಇಲ್ಲಿನ ಮೂವರು ಈ ಬಾರಿ ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಂಸದರಾಗಿ ಆಯ್ಕೆಯಾಗಿರುವುದು ಇದಕ್ಕೆ ಉದಾಹರಣೆ.

4ನೇ, 3ನೇ ಬಾರಿ ಇಬ್ಬರು ಎರಡನೇ ಬಾರಿ ಒಬ್ಬರು!
ಪಾಲ್ತಾಡಿ ಗ್ರಾಮದ ಕುಂಜಾಡಿ ನಿವಾಸಿ ನಳಿನ್‌ ಅವರಿಗೆ ಇದು ಹ್ಯಾಟ್ರಿಕ್‌ ಗೆಲುವು.

ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿ ಸದಾನಂದ ಗೌಡ ನಾಲ್ಕನೇ ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ. 2004ರಲ್ಲಿ ದ.ಕ., 2009ರಲ್ಲಿ ಉಡುಪಿ- ಚಿಕ್ಕಮಗಳೂರು, 2014 ಮತ್ತು ಈ ಬಾರಿ 2019 ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಆರಿಸಿ ಬಂದಿದ್ದಾರೆ.
ಚಾರ್ವಾಕ ಗ್ರಾಮದ ಕರಂದ್ಲಾಜೆ ನಿವಾಸಿ ಶೋಭಾ 2014ರಲ್ಲಿ ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಮೊದಲ ಬಾರಿ ಸಂಸದರಾಗಿದ್ದರು. 2019ರಲ್ಲಿ ಮತ್ತೆ ಗೆಲುವು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next