ಕಲಬುರಗಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ ಮೂವರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.
ನಗರದ ಇಸ್ಲಾಮಾಬಾದ್ ಕಾಲೋನಿ ಮಹಿಳೆ (ಪಿ-641)ಯ ಸಂಪರ್ಕಕ್ಕೆ ಬಂದಿದ್ದ ಇಬ್ಬರು ಪುರುಷರಿಗೆ ಸೋಂಕು ಕಾಣಿಸಿಕೊಂಡಿದೆ. 35 ವರ್ಷದ ವ್ಯಕ್ತಿ (ಪಿ-698) ಮತ್ತು ಮತ್ತೋರ್ವ 41 ವರ್ಷದ ವ್ಯಕ್ತಿ (ಪಿ-699)ಗೆ ಸೋಂಕು ದೃಢಪಟ್ಟಿದೆ.`( ಇಂದು ಪತ್ತೆಯಾದ ಮೂವರು ಸೋಂಕಿತರ ಪೈಕಿ 35 ವರ್ಷದ (ಪಿ-698) ಪುರುಷ ಎಂದು ಬುಲೆಟಿನ್ ನಲ್ಲಿ ತಪ್ಪಾಗಿ ತಿಳಿಸಿಲಾಗಿದೆ. ಇದು ಮಹಿಳಾ ರೋಗಿಯಾಗಿರುತ್ತದೆ ಎಂದು ಜಿಲ್ಲಾಡಳಿತ ಸ್ಪಷ್ಟ ಪಡಿಸಿದೆ)
36 ವರ್ಷದ ಈ ಮಹಿಳೆಗೆ ತನ್ನ ಪತಿಯಿಂದ ಕೋವಿಡ್ ಸೋಂಕು ಹರಡಿತ್ತು. ಉಸಿರಾಟದ ಸಮಸ್ಯೆ ಬಳಲುತ್ತಿದ್ದ ಈಕೆಯ ಪತಿ (ಪಿ-604)ಗೆ ಮೇ 3ರಂದು ಕೋವಿಡ್ ಖಚಿತವಾಗಿತ್ತು.
ಮತ್ತೊಂದು ಪ್ರಕರಣ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ 37 ವರ್ಷದ ವ್ಯಕ್ತಿ (ಪಿ-642) ಯ ಸಂಪರ್ಕದಿಂದ 35 ವರ್ಷದ ವ್ಯಕ್ತಿ (ಪಿ-697)ಗೆ ಮಹಾಮಾರಿ ಸೋಂಕು ಹರಡಿದೆ.
ಈ ಮೂಲಕ ಕೋವಿಡ್ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 28 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆರು ಜನ ಸೋಂಕಿತರು ಮೃತಪಟ್ಟಿದ್ದು, ಉಳಿದಂತೆ ಇತರ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.