Advertisement
ಕಾಂಗ್ರೆಸಿನ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಕೆ, ಮನೆಯ ಯಜಮಾನಿಗೆ ಎರಡು ಸಾವಿರ ರೂ. ಸಹಾಯಧನ, ಹತ್ತು ಕೆ.ಜಿ. ಅಕ್ಕಿ ಉಚಿತ ವಿತರಣೆ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಘೋಷಣೆ ಇದಕ್ಕೆ ನಾಂದಿ ಹಾಡಿದರೆ, ಬಿಜೆಪಿ ಗೃಹಿಣಿಶಕ್ತಿ ಯೋಜನೆಯನ್ನು ಪ್ರಕಟಿಸಿದೆ. ಜೆಡಿಎಸ್ ಕೂಡ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ವಾಡಿಕೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿದೆ.
ಪರಿವರ್ತನೆಯಾಗಿದ್ದನ್ನು ಅವರು ವಿವರಿಸುತ್ತಾರೆ.
Related Articles
Advertisement
ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳ ವಿತರಣೆ, ಪುರುಷರಿಗೆ ಪಂಚೆ, ಮಹಿಳೆಯರಿಗೆ ಸೀರೆ ವಿತರಣೆ, ಎರಡು ರೂಪಾಯಿಗೆ ಒಂದು ಕೆ.ಜಿ. ಆಕ್ಕಿ ವಿತರಿಸುವ ಕಾರ್ಯಕ್ರಮವನ್ನು ಜನತಾಪಕ್ಷ ಪ್ರಕಟಿಸಿತು. ಮೊದಲು ಬಿಡುಗಡೆಯಾದ ಚುನಾವಣ ಪ್ರಣಾಳಿಕೆಯಲ್ಲಿ ಇವುಗಳು ಇರಲಿಲ್ಲ. ಅನಂತರ ವಿಶೇಷ ಪ್ರಣಾಳಿಕೆಯಲ್ಲಿ ಇವುಗಳನ್ನು ಪ್ರಕಟಿಸಲಾಯಿತು. ಜನತಾಪಕ್ಷ ಬಹುಮತ ಪಡೆದು ಮರಳಿ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆ ಮತ್ತೆ ಮುಖ್ಯಮಂತ್ರಿಯಾದರು. ಈ ಕಾರ್ಯಕ್ರಮಗಳನ್ನು ಜಾರಿಗೆ ತಂದಿತು.
ಉಚಿತವಾಗಿ ಅಕ್ಕಿಯನ್ನು ವಿತರಿಸುವ ಜನಪ್ರಿಯ ಯೋಜನೆಯ ಕಲ್ಪನೆ ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದವು. ತಮಿಳುನಾಡಿನಲ್ಲಿ ಅಲ್ಲಿನ ರಾಜಕೀಯ ಪಕ್ಷವೊಂದು ಮನೆಮನೆಗೆ ಕಲರ್ ಟಿವಿ ನೀಡುವ ಕಾರ್ಯಕ್ರಮವನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಹೆಚ್ಚು ಪ್ರಚಾರ ಪಡೆದಿತ್ತು. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲಾ ಮಕ್ಕಳು ತರಗತಿಗೆ ಹಾಜರಾದರೆ ಒಂದು ರೂಪಾಯಿ ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದರು. ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಹತ್ತು ಎಚ್‌ಪಿ ಮೋಟಾರ್‌ವರೆಗೂ ಉಚಿತ ವಿದ್ಯುತ್ ಪೂರೈಕೆ ನೀಡಿದ್ದರು. ಪಂಪ್‌ಸೆಟ್‌ಗಳಿಗೆ ಮೀಟರ್ ಇಲ್ಲದೇ ಉಚಿತ ವಿದ್ಯುತ್ ನೀಡಲಾಗಿತ್ತು.
ಜನತಾದಳ 1994ರಲ್ಲಿ ಅಧಿಕಾರಕ್ಕೆ ಬಂದಾಗ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸುವ ಕಾರ್ಯಕ್ರಮ ಜಾರಿಗೆ ತಂದಿತು. ಎಚ್.ಡಿ. ದೇವೇಗೌಡ ಅವರು ಪ್ರಧಾನಮಂತ್ರಿ ಯಾಗಿದ್ದಾಗ ರಸಗೊಬ್ಬರಗಳಿಗೆ ಸಬ್ಸಿಡಿ ನೀಡುವ ಕಾರ್ಯಕ್ರಮವನ್ನು ಘೋಷಿಸಿ ಜಾರಿಗೆ ತಂದರು. ಸಾಮಾನ್ಯವಾಗಿ ಅಧಿಕಾರಕ್ಕೆ ಬಂದ ಅನಂತರ ಜನಪ್ರಿಯ ಕಾರ್ಯಕ್ರಮ ಗಳನ್ನು ಘೋಷಿಸಿ ಜಾರಿಗೊಳಿಸಿದ್ದು ಹೆಚ್ಚು. ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಜಾರಿಗೆ ಬಂದ ಮಧ್ಯಾಹ್ನದ ಬಿಸಿಯೂಟವೂ ಒಂದು ರೀತಿ ಉಚಿತವೇ. ರೈತರ ಸಾಲಮನ್ನಾ ಕೂಡ ಒಂದು ರೀತಿ ಉಚಿತ ಕಾರ್ಯಕ್ರಮ ಎನ್ನುವವರು ಇದ್ದಾರೆ.
ಉಚಿತ ಎನ್ನುವುದು ಬೇರೆ ಬೇರೆ ರೂಪಗಳಲ್ಲಿರುತ್ತವೆ. ಉದ್ಯಮಿಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿ ನೀಡುವುದು ಒಂದು ರೀತಿ ಉಚಿತವೇ ಎಂಬುದು ಅವರ ವಾದ. ಅದು 2006ನೇ ಇಸವಿ. ಜೆಡಿಎಸ್ -ಬಿಜೆಪಿ ಸಮ್ಮಿಶ್ರ ಸರಕಾರ. ಆಗ ಹಣಕಾಸು ಖಾತೆಯನ್ನೂ ಹೊತ್ತಿದ್ದ ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಲಾ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸೈಕಲ್ ವಿತರಿಸುವ ಕಾರ್ಯಕ್ರಮವನ್ನು ಪ್ರಕಟಿಸಿದರು.
ಸಿದ್ದರಾಮಯ್ಯ ಅವರು 2013ರಲ್ಲಿ ಸಿಎಂ ಆದ ಅನಂತರ ಭಾಗ್ಯಗಳ ಯೋಜನೆಗಳನ್ನು ಜಾರಿಗೆ ತಂದರು. ಅನ್ನಭಾಗ್ಯ, ಶಾದಿಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಸಾರಥ್ಯ ವಹಿಸಿದ್ದಾಗ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಯೋಜನೆಯನ್ನು ಪ್ರಕಟಿಸಿ ಜಾರಿಗೆ ತಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಅನಂತರ ಈಗ ಸಪ್ತಪದಿ ಎಂಬ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉಚಿತವಾಗಿ ತಾಳಿ, ಸೀರೆ, ಪಂಚೆಯನ್ನು ವಿತರಿಸುತ್ತಿದೆ.
ಇಂದಿರಾ ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗಲೇ ಉಚಿತ ಎಂಬುದು ಆರಂಭವಾಯಿತು. ಇಂದಿರಾಗಾಂಧಿ ಅವರ ಗರೀಬಿ ಹಠಾವೋ ಸ್ಲೋಗನ್ನೇ ಫ್ರೀ ಬೀ. ಇದು ಕಾಂಗ್ರೆಸಿಗೆ ಓಟ್ ಬ್ಯಾಂಕ್ ಆಗಿ ಪರಿವರ್ತನೆಯಾಯಿತು. ದೇಶದಲ್ಲಿ ಬಡವರ ಸಂಖ್ಯೆ ಅಧಿಕ. ಹೀಗಾಗಿ ಸರಕಾರಗಳು ಉಚಿತವಾಗಿ ನೀಡುವ ಪದ್ಧತಿ ಆರಂಭಿಸಿದವು. ರೈತರ ಸಾಲ ಮನ್ನಾ ಕೂಡ ಒಂದು ರೀತಿ ಉಚಿತವೇ. ಉದ್ಯಮಿಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿಯೂ ಉಚಿತದ ಮತ್ತೊಂದು ರೂಪ ಆದರೆ ಫ್ರೀ ಬೀಗಳು ಅಂತಹ ಪಕ್ಷವನ್ನು ಅಧಿಕಾರಕ್ಕೆ ತರುತ್ತದೆ ಎಂಬ ಗ್ಯಾರಂಟಿ ಏನೂ ಇಲ್ಲ.*ಕೂಡ್ಲಿ ಗುರುರಾಜ
● ಮುಜಾಫರ್ ಅಸ್ಸಾದಿ, ರಾಜಕೀಯ ಚಿಂತಕರು