ಕಾರವಾರ: ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನ ಆಸ್ಪತ್ರೆಯಲ್ಲಿ ಮೂರು ತಿಂಗಳ ಮಗು ನ್ಯೂಮೇನಿಯಾದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ರಾಜನ್ ಎಂಬ ಮಗು ಮೃತಪಟ್ಟ ದುರ್ದ್ವೈವಿ. ಮಗುವನ್ನು ಉಡುಪಿ ಆಸ್ಪತ್ರೆಗೆ ಸಾಗಿಸಲು ವೆಂಟಿಲೇಟರ್ ಇರುವ ಅಂಬುಲೆನ್ಸ್ ಸಕಾಲಕ್ಕೆ ಸಿಗಲಿಲ್ಲ ಎಂದು ಮಗುವಿನ ಪೋಷಕರು ಆಸ್ಪತ್ರೆ ಎದುರು ಕೆಲ ಕಾಲ ಪ್ರತಿಭಟನೆ ಮಾಡಿದರು.
ಕಿನ್ನರ ಗ್ರಾಮದ ರಾಜೇಶ್ ನಾಗೇಕರ್ ಎಂಬುವವರು ತಮ್ಮ ಮಗುವನ್ನು ಮೂರು ದಿನದ ಹಿಂದೆ ಅನಾರೋಗ್ಯದ ನಿಮಿತ್ತ ಕ್ರಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಗೆ ಮಗುವನ್ನು ಅವರು ದಾಖಲಿಸಲಾಗಿತ್ತು. ಅಲ್ಲಿ ಗುಣವಾಣದ ಕಾರಣ ಕ್ರಿಮ್ಸ್ ಐಸಿಯುಗೆ ತರಲಾಗಿತ್ತು. ಆದರೆ ಮಗುವಿನ ಆರೋಗ್ಯ ಸುಧಾರಿಸದ ಕಾರಣ ಉಡುಪಿಗೆ ಕರೆದೊಯ್ಯಲು ವೈದ್ಯರು ಸೂಚಿಸಿದರು.
ಇದನ್ನೂ ಓದಿ:ಧಾರ್ಮಿಕ ಕಾರಣಕ್ಕೆ ಕ್ರಿಕೆಟ್ ಗೆ ವಿದಾಯ ಹೇಳಿದ 18ನೇ ವರ್ಷದ ಪಾಕ್ ಆಟಗಾರ್ತಿ ಆಯೇಷಾ ನಸೀಂ
ಆದರೆ ಮಗುವಿಗೆ ಬಳಸುವ ವೆಂಟಿಲೇಟರ್ ಇರುವ ಅಂಬುಲೆನ್ಸ್ ಸಿಗದ ಕಾರಣ, ಮಗುವನ್ನು ಬೇರೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿದೆ. ಇದರಿಂದ ನೊಂದ ರಾಜೇಶ್ ನಾಗೇಕರ ದಂಪತಿಗಳು ಕಾರವಾರ ಮೆಡಿಕಲ್ ಕಾಲೇಜು ಎದುರು ಮಗುವಿನ ಶವಯಿಟ್ಟು ಕೆಲ ಸಮಯ ಪ್ರತಿಭಟನೆ ಮಾಡಿದರು. ವೆಂಟಿಲೇಟರ್ ಇರುವ ಅಂಬುಲೆನ್ಸ್ ವ್ಯವಸ್ಥೆಯಿರಲಿ ಎಂದು ಆಗ್ರಹಿಸಿದರು.
ಇನ್ನಾದರೂ ಮಕ್ಕಳಿಗೂ ಈ ಸ್ಥಿತ ಬರದಿರಲಿ ಎಂಬುದು ಅವರ ಪ್ರತಿಭಟನೆಯ ಉದ್ದೇಶವಾಗಿತ್ತು. ನಂತರ ಮಗುವಿನ ಶವವನ್ನು ಆಟೋದಲ್ಲಿ ಕಿನ್ನರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡಿದರು.