Advertisement

ಕಾಶ್ಮೀರ ಎಲ್‌ಓಸಿಯಲ್ಲಿ ಮೂವರು ನುಸುಳುಕೋರ ಉಗ್ರರ ಹತ್ಯೆ

12:11 PM Jul 27, 2017 | Team Udayavani |

ಶ್ರೀನಗರ : ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್‌ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಇಂದು ಗುರುವಾರ ಬೆಳಗ್ಗೆ ಗಡಿ ನುಸುಳಿ ಬರಲು ಯತ್ನಿಸಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಗುಂಡಿಟ್ಟು ಕೊಂದಿವೆ. 

Advertisement

ಗಡಿ ರೇಖೆಯ ಪ್ರದೇಶದಲ್ಲಿ ಶಂಕಾಸ್ಪದ ಚಲನ ವಲನಗಳು ಕಂಡು ಬಂದಾಗ ಭದ್ರತಾ ಪಡೆಗಳು ಮೂವರು ನುಸುಳುಕೋರ ಉಗ್ರರನ್ನು ಗುರುತಿಸಿದರು. 

ಭದ್ರತಾ ಪಡೆಗಳು ಉಗ್ರರಿಗೆ ನಿಲ್ಲುವಂತೆ ಸೂಚಿಸಿದಾಗ ಅವರು ಗುಂಡಿನ ಕಾಳಗಕ್ಕೆ ಮುಂದಾದರು. ಒಡನೆಯೇ ಭದ್ರತಾ ಪಡೆಗಳು ಮೂವರೂ ನುಸುಳುಕೋರ ಉಗ್ರರನ್ನು ಗುಂಡಿಕ್ಕಿ ಕೊಂದವು. 

ಇನ್ನಷ್ಟು  ನುಸುಳು ಕೋರ ಉಗ್ರರು ಗಡಿಯಲ್ಲಿ ಇದ್ದಿರಬಹುದು ಎಂಬ ಶಂಕೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next